More

    ಕರೊನಾ ಬುಲೆಟಿನ್​: ಸೋಂಕಿತರಿಗಿಂತಲೂ ಗುಣವಾದವರ ಸಂಖ್ಯೆ ಬಹುತೇಕ ಡಬಲ್​!

    ಬೆಂಗಳೂರು: ರಾಜ್ಯದಲ್ಲಿ ಗುರುವಾರವೊಂದೇ ದಿನ ಹೊಸದಾಗಿ 4,025 ಕೋವಿಡ್​-19 ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 8,16,809ಕ್ಕೆ ತಲುಪಿದೆ.

    ಮತ್ತೊಂದೆಡೆ ಗುಣಮುಖರ ಪೈಕಿ ಒಂದೇ ದಿನದಲ್ಲಿ 7,661 ಮಂದಿ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್​ ಸೆಂಟರ್​ಗಳಿಂದ ಬಿಡುಗಡೆ ಆಗಿದ್ದು, ಗುಣವಾದವರ ಒಟ್ಟು ಸಂಖ್ಯೆ 7,41,219ಕ್ಕೆ ಏರಿಕೆಯಾಗಿದೆ.

    ಅದಾಗ್ಯೂ ರಾಜ್ಯದಲ್ಲಿ 64,480 ಪ್ರಕರಣಗಳು ಸಕ್ರಿಯವಾಗಿದ್ದು, ಆ ಪೈಕಿ 935 ಮಂದಿ ಗಂಭೀರ ರೋಗಲಕ್ಷಣಗಳಿಂದಾಗಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರವೊಂದೇ ದಿನ 45 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,091ಕ್ಕೆ ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts