More

    ಮೂರರಲ್ಲಿ ಇಬ್ಬರಿಗೆ ಕರೊನಾ ಪ್ರತಿಕಾಯ; 40 ಕೋಟಿ ಜನರಿಗೆ ಇನ್ನೂ ತಪ್ಪಿಲ್ಲ ಆಪತ್ತು

    ನವದೆಹಲಿ: ಮಕ್ಕಳು ಸೇರಿದಂತೆ ಭಾರತೀಯ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಕರೊನಾ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನೂ 40 ಕೋಟಿ ಜನರಿಗೆ ಕರೊನಾದ ಅಪಾಯವಿದೆ ಎಂದು ತಿಳಿಸಲಾಗಿದೆ.

    ರಾಷ್ಟ್ರೀಯ ಸೀರೋಸರ್ವೆಯ ನಾಲ್ಕನೇ ಸುತ್ತಿನ ವರದಿಯಲ್ಲಿ ಈ ವಿಷಯ ಬಯಲಾಗಿದೆ. ಈ ಸುತ್ತಿನಲ್ಲಿ ಮಕ್ಕಳನ್ನೂ ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ. 6-17 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಕ್ಕಳು ಕೋವಿಡ್ -19 ಗೆ ಒಡ್ಡಿಕೊಂಡಿದ್ದಾರೆ ಮತ್ತು ಅದರ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. 45-60 ವರ್ಷ ವಯಸ್ಸಿನ ಶೇ. 77.6 ಜನರಲ್ಲಿ ಪ್ರತಿಕಾಯ ಕಂಡುಬಂದಿದೆ. ನಂತರ 60 ವರ್ಷಕ್ಕಿಂತ ಮೇಲ್ಪಟ್ಟ ಶೇ. 76.7 ಜನರಲ್ಲಿ ಮತ್ತು 18-44 ವರ್ಷ ವಯಸ್ಸಿನವ ಶೇ. 66.7 ಜನರಲ್ಲಿ ಪ್ರತಿಕಾಯಗಳು ಕಾಣಿಸಿದೆ.

    ಈ ಸಮೀಕ್ಷೆಯಲ್ಲಿ, ಮಕ್ಕಳನ್ನು ಎರಡು ವಯಸ್ಸಿನ ಗುಂಪುಗಳಾಗಿ ವಿಂಗಡಿಸಲಾಗಿತ್ತು. 6-9 ವರ್ಷ ಎನ್ನುವ ಒಂದು ಗುಂಪು ಹಾಗೂ 10-17 ವರ್ಷದೊಳಗಿನ ಮಕ್ಕಳ ಎರಡನೇ ಗುಂಪನ್ನು ಪರಿಗಣಿಸಲಾಗಿತ್ತು. ಅದರಲ್ಲಿ 6-9 ವರ್ಷಗಳ ವಿಭಾಗದಲ್ಲಿ ಶೇ. 57.2 ಮಕ್ಕಳಲ್ಲಿ ಮತ್ತು 10-17 ವರ್ಷಗಳ ವಿಭಾಗದಲ್ಲಿ ಶೇ.61.6 ಮಕ್ಕಳಲ್ಲಿ ಪ್ರತಿಕಾಯ ಕಾಣಿಸಿಕೊಂಡಿದೆ. (ಏಜೆನ್ಸೀಸ್)

    ಪಬ್​ಜಿ ವಾಪಸಾದ ಬೆನ್ನಲ್ಲೇ ಟಿಕ್​ಟಾಕ್​ಗೂ ಗ್ರೀನ್ ಸಿಗ್ನಲ್?

    ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

    ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts