More

    10 ಸಾವಿರದ ಗಡಿ ದಾಟಿದ ಗುಣಮುಖರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ 7 ಜನರಿಗೆ ಕರೊನಾ ದೃಢಪಟ್ಟಿದ್ದು, 25 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

    ಈವರೆಗೆ 10,464 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 10,024 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 190 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 250 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 215 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 35 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಬ್ಯಾಡಗಿ-1, ಹಾನಗಲ್ಲ-1, ಹಿರೇಕೆರೂರ-2, ರಾಣೆಬೆನ್ನೂರ-3 ಜನರಿಗೆ ಸೇರಿ ಒಟ್ಟು 7 ಜನರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.

    ಸೋಂಕಿನಿಂದ ಗುಣವಾಗಿ ಶುಕ್ರವಾರ ಬ್ಯಾಡಗಿ-3, ಹಾನಗಲ್ಲ-9, ಹಾವೇರಿ-6, ಹಿರೇಕೆರೂರು-2, ರಾಣೆಬೆನ್ನೂರು-2, ಸವಣೂರ-1, ಶಿಗ್ಗಾಂವಿ-2 ಜನ ಸೇರಿ 25 ಜನರು ಬಿಡುಗಡೆ ಹೊಂದಿದ್ದಾರೆ.

    ಇಬ್ಬರು ಸಾವು: ಬ್ಯಾಡಗಿ ತಾಲೂಕು ರಾಮಗೊಂಡನಹಳ್ಳಿ ಗ್ರಾಮದ 62 ವರ್ಷದ ಪುರುಷ ಅ. 16ರಂದು ತೀವ್ರ ಉಸಿರಾಟ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅ. 20ರಂದು ಮೃತಪಟ್ಟಿದ್ದಾರೆ. ರಾಣೆಬೆನ್ನೂರ ತಾಲೂಕು ಹರನಗಿರಿ ಗ್ರಾಮದ 74 ವರ್ಷದ ಪುರುಷ ಅ. 14ರಂದು ತೀವ್ರ ಉಸಿರಾಟ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅ. 15ರಂದು ಮೃತಪಟ್ಟಿದ್ದಾರೆ. ಇವರಿಬ್ಬರ ಮರಣವನ್ನು ಶುಕ್ರವಾರ ದೃಢೀಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts