More

    ಪ್ರತಿಕಾಮಗಾರಿಯ ದಾಖಲೆ ಸಿದ್ದವಿರಲಿ

    ದೇವದುರ್ಗ: ಗ್ರಾಪಂ ವ್ಯಾಪ್ತಿಲ್ಲಿ ಕೈಗೊಳ್ಳುವ ಪ್ರತಿಯೊಂದು ಯೋಜನೆ ಕಾಮಗಾರಿಗಳ ಅಗತ್ಯ ದಾಖಲೆಗಳನ್ನು ತನಿಖೆ ವೇಳೆ ಹಾಜರಿ ಪಡಿಸಬೇಕು ಎಂದು ತಾಪಂ ಇಒ ಹಾಗೂ ಶಾವಂತಗೇರಾ ಗ್ರಾಪಂ ಆಡಳಿತಾಧಿಕಾರಿ ರಾಮರೆಡ್ಡಿ ಪಾಟೀಲ್ ಸೂಚಿಸಿದರು.

    ಇದನ್ನೂ ಓದಿ: http://ಪ್ರತಿಕಾಮಗಾರಿಯ ದಾಖಲೆ ಸಿದ್ದವಿರಲಿ

    ತಾಲೂಕಿನ ಶಾವಂತಗೇರಾ ಗ್ರಾಪಂಗೆ ಈಚೆಗೆ ಭೇಟಿನೀಡಿ ದಾಖಲೆ ಪರಿಶೀಲನ ನಡೆಸಿದರು. ಕಳೆದ ಹತ್ತು ವರ್ಷಗಳಿಂದ ಈ ಗ್ರಾಪಂಗೆ ಚುನಾವಣೆ ನಡೆಯದ ಕಾರಣ ಆಡಳಿತ ಮಂಡಳಿ ರಚನೆಯಾಗಿಲ್ಲ.

    ಅಧಿಕಾರಿಗಳು ಜನರ ಸಂಕಷ್ಟಗಳಿಗೆ ತಕ್ಷಣವೇ ಸ್ಪಂದಿಸಿ. ಗ್ರಾಪಂ ಅಧ್ಯಕ್ಷ, ಸದಸ್ಯರು ಮಾಡಬೇಕಿದ್ದ ಕೆಲಸ ಅಧಿಕಾರಿಗಳ ಮೇಲೆ ಬಿದ್ದಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು.

    ಉದ್ಯೋಗ ಖಾತ್ರಿ ಯೋಜನೆ, 14 ಮತ್ತು 15ನೇ ಹಣಕಾಸು ಯೋಜನೆಯಡಿ ಯಾವುದೇ ಕಾಮಗಾರಿ ಮಾಡುವಾಗ ದಾಖಲೆ ಸಿದ್ದಪಡಿಸಿಕೊಳ್ಳ ಬೇಕು. ಪ್ರತಿ ಕೆಲಸದ ಪ್ಲಾನ್, ವರ್ಕ್‌ಆರ್ಡರ್, ಜಿಪಿಎಸ್ ದಾಖಲೆ, ಕಾಮಗಾರಿ ಗುಚ್ಚ, ಫೋಟೋ, ಅಗತ್ಯ ದಾಖಲೆ ನೋಡಿಕೊಂಡು ಕೆಲಸ ನೀಡಬೇಕು.

    ನರೇಗಾ ಯೋಜನೆಯಡಿ ಯಾವುದೇ ಸಮಸ್ಯೆ ಆಗದಂತೆ ಜನರಿಗೆ ಸರಿಯಾಗಿ ಕೆಲಸ ನೀಡುವ ಜತೆಗೆ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.

    ಪಿಡಿಒ ಗುರುಸ್ವಾಮಿ ಸ್ಥಾವರಮಠ, ಸಿಬ್ಬಂದಿ ವಿಶ್ವನಾಥ ಸ್ವಾಮಿ, ಡಾಟಾ ಎಂಟ್ರಿ ಆಪರೇಟರ್ ಪ್ರಭು ನಾಯಕ, ಬಿಲ್ ಕಲೆಕ್ಟರ್ ರಾಜು, ಬೂದಯ್ಯ ಸ್ವಾಮಿ ಇಂಗಳದಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts