More

    ರೈತರಿಂದ ಪ್ರಯೋಗಿಕ ಕೃಷಿಗೆ ಸಹಕಾರ

    ರಿಪ್ಪನ್‌ಪೇಟೆ: ಪಟ್ಟಣ ಸಮೀಪದ ಗವಟೂರಿನಲ್ಲಿ ಕಳೆದ 75 ದಿನಗಳಿಂದ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ರೈತರೊಂದಿಗೆ ಪಾಲ್ಗೊಂಡು ಸುಧಾರಿತ ಕೃಷಿ ಪದ್ಧತಿ ಮಾಹಿತಿಯನ್ನು ಪರಸ್ಪರ ಹಂಚಿಕೊಂಡ ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ವಿವಿ ವಿದ್ಯಾರ್ಥಿನಿಯರನ್ನು ಗ್ರಾಮಸ್ಥರು ಗುರುವಾರ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಕೃಷಿ ವಿವಿಯ ಚಿಗುರು ತಂಡದ ವಿದ್ಯಾರ್ಥಿನಿ ನವ್ಯಾ ಮಾತನಾಡಿ, ಮೊದಲು ಆತಂಕದಲ್ಲಿದ್ದ ನಮ್ಮನ್ನು ತಮ್ಮ ಮನೆ ಮಕ್ಕಳಂತೆ ಸಲಹಿದರು. ಪ್ರತಿ ಮನೆ ಭೇಟಿ ಸಂದರ್ಭದಲ್ಲಿ ಕೃಷಿ ಕಸುಬಿನ ಬಗ್ಗೆ ಅವರಲ್ಲಿನ ಜ್ಞಾನವನ್ನು ನಮಗೆ ಧಾರೆಯೆರೆದಿದ್ದಾರೆ. ನಾವು ಹೇಳುವುದನ್ನೂ ಆಸಕ್ತಿಯಿಂದ ಕೇಳಿ ಪ್ರಾಯೋಗಿಕ ಕೃಷಿಗೂ ಸಹಕರಿಸಿದ್ದಾರೆ. ಶಿಕ್ಷಣ ಉದ್ದೇಶದಿಂದ ಬಂದಿದ್ದರೂ ಇಲ್ಲನ ಜನರ ಆತ್ಮೀಯ ಬಾಂಧವ್ಯದ ಹಣತೆ ಹಚ್ಚಿದೆ. ರೈತರೆಲ್ಲರ ಎದೆಯಲ್ಲಿ ಕೃಷಿ ಹಸಿರು ಪ್ರಜ್ವಲಿಸಲಿ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯ ಜಿ.ಡಿ.ಮಲ್ಲಿಕಾರ್ಜುನ, ಗಣಪತಿ, ರೈತರಾದ ಚಂದ್ರಶೇಖರ, ದೇವರಾಜ ಗೌಡ, ಚಿದಾನಂದ, ಸೂರ್ಯ ಗೌಡ, ಹಿರಿಯ ನಾಗರಿಕ ನಾಗರಾಜ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts