More

    ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಿರ್ಭಯಾ ಅತ್ಯಾಚಾರ ಅಪರಾಧಿ 

    ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲುಶಿಕ್ಷೆಗೆ ಒಂದಲ್ಲ ಒಂದು ತಡೆ ಎದುರಾಗುತ್ತಿದೆ. ಅಪರಾಧಿಗಳು ಹಲವು ರೀತಿಯ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.

    ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಜ.29ರಂದು ಅರ್ಜಿ ಸಲ್ಲಿಸಿದ್ದ ಅಪರಾಧಿ ವಿನಯ್​ ಶರ್ಮಾ ಇಂದು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಪ್ರಪತಿಯವರು ತಿರಸ್ಕಾರ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ.  ವಿನಯ್​ ಶರ್ಮಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ​ ಅವರು ಫೆ.1ರಂದು ತಿರಸ್ಕರಿಸಿದ್ದರು.

    ಅಪರಾಧಿಗಳಾದ ಮುಕೇಶ್​ ಸಿಂಗ್​, ಪವನ್​ ಗುಪ್ತಾ, ವಿನಯ್​ಕುಮಾರ್ ಶರ್ಮಾ ಮತ್ತು ಅಕ್ಷಯ್​ ಕುಮಾರ್​​ಗೆ ಸುಪ್ರೀಂಕೋರ್ಟ್​ ಮರಣದಂಡನೆ ವಿಧಿಸಿದ್ದರೂ ಹಲವು ಕಾನೂನು ಪ್ರಕ್ರಿಯೆಗಳಿಂದ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಒಮ್ಮೆ ಡೆತ್ ವಾರಂಟ್ ಜಾರಿಯಾಗಿತ್ತು. ಆದರೆ  ಒಬ್ಬೊಬ್ಬರೇ ಕ್ಷಮಾದಾನ ಅರ್ಜಿ ಸಲ್ಲಿಸುತ್ತಿದ್ದಾರೆ. ಏನೇ ಆದೇಶ ಬಂದರೂ ಅದಕ್ಕೊಂದು ಮೇಲ್ಮನವಿ ಅರ್ಜಿ ಹಿಡಿದು ನ್ಯಾಯಾಲಯಗಳಿಗೆ ಎಡತಾಕುತ್ತಿದ್ದಾರೆ.

    ಅಪರಾಧಿಗಳಿಗೆ ಬ್ಲ್ಯಾಕ್​ ವಾರಂಟ್ ಜಾರಿಗೊಳಿಸಲು ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಸುಪ್ರೀಂಕೋರ್ಟ್​ಗೆ ಮನವಿ ಮಾಡಿವೆ. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts