More

    ನೇಪಾಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಚೀನಿ ಸುಂದರಿ

    ನವದೆಹಲಿ: ನೇಪಾಳದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಪರಿಹರಿಸಲು ಚೀನಾ ನೇರವಾಗಿ ನೇಪಾಳದ ರಾಜಕೀಯ ರಂಗಸ್ಥಳವನ್ನು ಪ್ರವೇಶಿಸಿದೆ. ನೇಪಾಳದಲ್ಲಿನ ಚೀನಾ ರಾಯಭಾರಿ ಹೌ ಯಾಂಕಿ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ವಿವಿಧ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

    ಅದರಲ್ಲೂ ವಿಶೇಷವಾಗಿ ಅವರ ನೇಪಾಳದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೂ ಮಾಹಿತಿ ನೀಡದೆ ಅವರ ಅನುಪಸ್ಥಿತಿಯಲ್ಲಿ ನೇಪಾಳದ ಅಧ್ಯಕ್ಷೆ ಬಿದ್ಯಾ ಭಂಡಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಕಳೆದ ಏಪ್ರಿಲ್​-ಮೇನಲ್ಲಿ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದ ಹೌ ಯಾಂಕಿ ಎಲ್ಲ ಬಣಗಳ ನಾಯಕರ ಜತೆ ಮಾತುಕತೆ ನಡೆಸಿ ಕೆ.ಪಿ. ಓಲಿ ಶರ್ಮ ನೇತೃತ್ವದ ಸರ್ಕಾರವನ್ನು ಉಳಿಸಲು ಸಹಕರಿಸಿದ್ದರು.

    ಇದನ್ನೂ ಓದಿ: ಭಾರತೀಯ ಕಂಪನಿಗಳಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್​ ಹೊಂದಿರುವ ಹೂಡಿಕೆ ಎಷ್ಟು ಗೊತ್ತಾ?

    ಈಗಲೂ ಅವರು ಈ ಕೆಲವನ್ನು ಮುಂದುವರಿಸಿದ್ದು ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಪುಷ್ಪ ಕಮಾಲ್​ ಪ್ರಚಂಡಾ ಸೇರಿ ಕೆ.ಪಿ. ಶರ್ಮ ಓಲಿ ವಿರುದ್ಧ ಬಂಡಾಯ ಎದ್ದಿರುವ ಎಲ್ಲ ನಾಯಕರನ್ನೂ ಕರೆಯಿಸಿಕೊಂಡು, ಒಗ್ಗಟ್ಟಿನಿಂದ ಇರುವಂತೆ ಸೂಚಿಸುತ್ತಿದ್ದಾರೆ. ಕಳೆದ ವಾರ ಇವರು ಅಧ್ಯಕ್ಷೆ ಬಿದ್ಯಾ ಭಂಡಾರಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದನ್ನು ಸೌಜನ್ಯದ ಭೇಟಿ ಎಂಬಂತೆ ಬಿಂಬಿಸಿದರೂ ಇದರ ಹಿಂದೆ ರಾಜಕೀಯ ಉದ್ದೇಶ ಇದ್ದಿದ್ದು ಗುಟ್ಟೇನಲ್ಲ.

    ಅಧ್ಯಕ್ಷೆ ಬಿದ್ಯಾ ಭಂಡಾರಿ ಜತೆಗಿನ ಹೌ ಭೇಟಿ ಕುರಿತು ಪ್ರಶ್ನಿಸಿದಾಗ ಚೀನಾ ರಾಯಭಾರ ಕಚೇರಿಯ ವಕ್ತಾರ ಝಾಂಗ್​ ಸಿ, ನೇಪಾಳ ಕಮ್ಯುನಿಸ್ಟ್​ ಪಕ್ಷದಲ್ಲಿ ಬಿರುಕು ಮೂಡುವುದನ್ನು ನೋಡಲು ಚೀನಾಕ್ಕೆ ಇಷ್ಟವಿಲ್ಲ. ಆದ್ದರಿಂದ ನೇಪಾಳದ ಹಿತದೃಷ್ಟಿಯಿಂದ ತಮ್ಮ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬೇಗನೆ ಬಗೆಹರಿಸಿಕೊಂಡು, ಒಗ್ಗಟ್ಟಿನಿಂದ ಇರುವಂತೆ ಮಾಡಲು ಚೀನಾ ಮುಂದಾಗಿದೆ ಎಂದು ಹೇಳಿದರು.

    ರಾಯಭಾರಿ ಮತ್ತು ರಾಯಭಾರ ಕಚೇರಿ ನೇಪಾಳ ಸರ್ಕಾರ, ರಾಜಕೀಯ ಪಕ್ಷಗಳು, ಚಿಂತನಕಾರರು ಹಾಗೂ ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಆಗಾಗ್ಗೆ ಇವರೆಲ್ಲರನ್ನೂ ಭೇಟಿ ಮಾಡಿ ಸಾಮಾನ್ಯವಾಗಿ ಎಲ್ಲರನ್ನೂ ಬಾಧಿಸುವ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಝಾಂಗ್​ ಸಮಜಾಯಿಷಿ ನೀಡಿದರು.

    ಇದನ್ನೂ ಓದಿ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ

    ವಿದೇಶಾಂಗ ವ್ಯವಹಾರಗಳ ತಜ್ಞರು ಮಾತ್ರ ನೇಪಾಳದ ರಾಜಕೀಯರಂಗದಲ್ಲಿನ ಚೀನಾದ ಹಸ್ತಕ್ಷೇಪಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಆಂತರಿಕ ವಿಚಾರಗಳಲ್ಲಿ ಬಾಹ್ಯ ಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಮುಖಂಡರದ್ದೇ ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೇಪಾಳದ ಮಾಜಿ ರಾಯಭಾರಿ ಲೋಕ್​ರಾಜ್​ ಬರಾಲ್​, ಇದಕ್ಕೂ ಮುನ್ನ ಭಾರತೀಯ ರಾಯಭಾರಿಗಳು ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು. ಆ ಬಗ್ಗೆ ನೇಪಾಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೆ, ಈಗ ಚೀನಾ ಮೂಗುತೂರಿಸುವ ಕೆಲಸ ಮಾಡುತ್ತಿದೆ. ಆದರೆ ಇದು ನೇಪಾಳದ ಜನತೆಗೆ ಸಹ್ಯವಾಗಿದೆ. ನೇಪಾಳದ ಮಾಧ್ಯಮಗಳಲ್ಲಿ ಮಾತ್ರವೇ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ನಮ್ಮ ರಾಜಕೀಯ ಮುಖಂಡರು ಮಾತ್ರ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರಿಯಾಂಕಾ ಚೋಪ್ರಾ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಪಡೆಯುವ ಮೊತ್ತ ಎಷ್ಟಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts