More

    ಸಂತೋಷ್ ಆತ್ಮಹತ್ಯೆ, ತಿಳಿಯದೇ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುವೆ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಿಂದ ನಾನು ಸಾಕಷ್ಟು ಬುದ್ದಿ ಕಲಿತಿದ್ದೇನೆ. ಒಂದು ವೇಳೆ ನನಗೆ ತಿಳಿಯದೇ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇನೆ. ಆದರೆ ಅನ್ಯಾಯವಾಗಿ ಒಂದು ಜೀವ ಹೋಯ್ತಲ್ಲ. ಆತನ ಕುಟುಂಬ ಅನಾಥವಾಯಿತಲ್ಲ ಎಂಬ ನೋವು ನನಗಿದೆ.
    ಇದು ಶಿವಮೊಗ್ಗದ ಕೋಟೆ ರಸ್ತೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನೋವಿನ ನುಡಿ. ಕೋಟೆರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಗುರುವಾರ ವಿಶೇಷ ಪೂಜೆ ಸಲ್ಲಿಸಿ, ಸತ್ಯಕ್ಕೆ ಸಂದ ಜಯ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
    ನನ್ನ ಮೇಲೆ ಆರೋಪ ಬರುತ್ತಿದ್ದಂತೆ ಪಕ್ಷಕ್ಕೆ ಮುಜುಗರ ಉಂಟು ಮಾಡಿಬಿಟ್ಟೆನಲ್ಲ ಎಂಬ ನೋವು ನನ್ನನ್ನು ಸದಾ ಕಾಡುತ್ತಿತ್ತು. ಕಾರ್ಯಕರ್ತರು, ಅಭಿಮಾನಿಗಳು, ಸಾಧುಸಂತರು ಧೈರ್ಯ ತುಂಬಿದರು. ಆದರೆ ಅನ್ಯಾಯವಾಗಿ ಒಂದು ಜೀವ ಹೋಯಿತು. ಇದರಿಂದ ಆತನ ಕುಟುಂಬವೂ ಅನಾಥವಾಯಿತು ಎಂದರು.
    ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದವರು ಕೂಡ ಅಣ್ಣ ಪ್ರತಿಭಟನೆ ಮಾಡಿ ಬಂದಿದ್ದೀವಿ. ಆದರೆ ನಿಮ್ಮದು ತಪ್ಪಿಲ್ಲವೆಂದು ಹೇಳಿದ್ದರು. ಕಾರಿನಲ್ಲಿ ಬರುವ ವೇಳೆ ಕಾಂಗ್ರೆಸ್‌ನ ಕೆಲವು ಮಿತ್ರರು ನನಗೆ ದೋಷ ಮುಕ್ತರಾಗಿ ಹೊರಬರುತ್ತೀರಾ ಎಂದು ಆಶಿಸಿದ್ದರು ಎಂದು ಹೇಳಿದರು.
    ಶಾಸಕ ಹರತಾಳು ಹಾಲಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪ, ನಗರ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಎಸ್.ದತ್ತಾತ್ರಿ, ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಬಳ್ಳೇಕೆರೆ ಸಂತೋಷ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts