More

    ಮುಂದುವರಿದ ಪಿಎಸ್‌ಐ ಮಂಜುನಾಥ ವಿಚಾರಣೆ

    ರಾಯಚೂರು: ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಸಿದಂತೆ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿರುವ ದೇವದುರ್ಗ ತಾಲೂಕು ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮತ್ತು ಪೇದೆ ರಮೇಶ ವಿಚಾರಣೆ ಶನಿವಾರವೂ ಮುಂದುವರೆದಿದೆ.
    ಗಬ್ಬೂರಿನ ಾರೂಕ್ ಎಂಬಾತನಿಗೆ ಪಿಎಸ್‌ಐ ಮಂಜುನಾಥ ಐಪಿಎಲ್ ಬೆಟ್ಟಿಂಗ್ ಆರೋಪದಡಿ ಬಂಸುವುದಾಗಿ ಬೆದರಿಕೆ ಹಾಕಿ ಎರಡು ಲಕ್ಷ ರೂ.ಗೆ ಬೇಡಿಕೆ ಇಟ್ಟು 30 ಸಾವಿರ ರೂ.ಗಳನ್ನು ೆನ್ ಮೂಲಕ ಹಾಕಿಸಿಕೊಂಡಿದ್ದ. ನಂತರವೂ ಪೋನ್ ಮಾಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ.
    ಇದರಿಂದಾಗಿ ಬೇಸತ್ತ ಾರೂಕ್ ಲೋಕಾಯುಕ್ತರಿಗೆ ದೂರು ನೀಡಿದ್ದ. ಶುಕ್ರವಾರ ರಾತ್ರಿ ಾರೂಕ್ 50 ಸಾವಿರ ರೂ.ಗಳನ್ನು ಪೇದೆ ರಮೇಶನಿಗೆ 50 ಸಾವಿರ ರೂ. ನೀಡುವಾಗ ಲೋಕಾಯುಕ್ತ ಅಕಾರಿಗಳು ದಾಳಿ ನಡೆಸಿ ಪಿಎಸ್‌ಐ ಮತ್ತು ಪೇದೆಯನ್ನು ವಶಕ್ಕೆ ಪಡೆದಿದ್ದರು.
    ನಗರದ ಲೋಕಾಯುಕ್ತ ಕಚೇರಿಗೆ ಪಿಎಸ್‌ಐ ಮಂಜುನಾಥ ಮತ್ತು ಪೇದೆ ರಮೇಶನನ್ನು ಶನಿವಾರ ಕರೆತಂದ ಅಕಾರಿಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ಇಬ್ಬರ ಹೇಳಿಕೆಯನ್ನು ಪಡೆದುಕೊಂಡು ನ್ಯಾಯಾೀಶರ ಮುಂದೆ ಹಾಜರು ಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts