More

    ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ಸರ್ಕಾರಿ ಸ್ಥಳಗಳ ನಿರಂತರ ಒತ್ತುವರಿ

    ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ದಾನಿಗಳು ಸರ್ಕಾರಕ್ಕೆ ಕೊಟ್ಟಿರುವ ಜಾಗಗಳನ್ನು ಈವರೆಗೂ ಆಯಾ ಇಲಾಖೆಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿಲ್ಲ. ಇದ್ದರಿಂದ ಕೆಲವು ಶಾಲಾ, ಅಂಗನವಾಡಿ ಹಾಗೂ ಸರ್ಕಾರಿ ಜಾಗಗಳ ಕಟ್ಟಡಗಳು ಅಕ್ಕಪಕ್ಕದವರಿಂದ ಒತ್ತುವರಿಯಾಗಿವೆ ಎಂದು ಖ್ಯಾತ ಸಾಹಿತಿ ಕತ್ತಿಗೆ ಚನ್ನಪ್ಪ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಬಾರಿ ಈ ಬಗ್ಗೆ ಎಲ್ಲ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ದಾನಿಗಳು ತಮ್ಮ ಇಲಾಖೆಗೆ ಕೊಟ್ಟಿರುವ ಜಾಗ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ವಿವರಿಸಿದರು.

    ಈಗಾಗಲೆ ಗೋಮಾಳ, ಅರಣ್ಯ, ಕೆರೆಗಳು ಸಹ ಒತ್ತುವರಿಯಾಗಿವೆ. ಇದರ ಜತೆಗೆ ದಾನ ಕೊಟ್ಟಿರುವ ಜಾಗಗಳು ಒತ್ತುವರಿಯಾದರೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದರು.

    ಕೆಂಚಿಕೊಪ್ಪ ಪ್ರಾಥಮಿಕ ಶಾಲೆ, ಮಾದೇಣಹಳ್ಳಿ ಪಶುವೈದ್ಯಕೀಯ ಶಾಲೆ, ಕತ್ತಿಗೆ ಆರೋಗ್ಯ ಕೇಂದ್ರ ಸೇರಿದಂತೆ ಅವಳಿ ತಾಲೂಕಿನ ಹಲವು ಕಡೆ ಸರ್ಕಾರಿ ಸ್ವತ್ತು ಒತ್ತುವರಿಯಾಗಿದೆ. ಈಗಲಾದರೂ ದಾನಿಗಳು ಕೊಟ್ಟ ಜಮೀನುಗಳನ್ನು ಅಳತೆ ಮಾಡಿ ಇಲಾಖೆ ಹೆಸರಿಗೆ ಮಾಡಿಕೊಂಡರೆ ಒತ್ತುವರಿ ತಡೆಯಬಹುದು ಎಂದರು.

    ತಕ್ಷಣ ಸರ್ಕಾರಿ ಆಸ್ತಿ ಹದ್ದುಬಸ್ತ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಬಳಿ ಆಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಸಾಹಿತಿ ಕತ್ತಿಗೆ ಚನ್ನಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಸಾಹಿತ್ಯ ಬಳಗದ ಉಪಾಧ್ಯಕ್ಷ ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts