More

    ಈ 5 ಹಣ್ಣುಗಳ ಸೇವನೆಯಿಂದ ಆರೋಗ್ಯ ಏರುಪೇರಾಗುತ್ತದೆ! ಅವು ಯಾವ ಹಣ್ಣುಗಳು ಗೊತ್ತಾ?

    ಬೆಂಗಳೂರು: ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಅಧಿಕವಾಗಿದ್ದರೆ ಅಪಾಯದ ಗಂಟೆ ಎಂದು ಪರಿಗಣಿಸಬೇಕು. ಏಕೆಂದರೆ ಅದು ಕೀಲು ನೋವನ್ನು ಉಂಟುಮಾಡುತ್ತದೆ. ಅದರಿಂದ ಚಲನೆಗೆ ಅಡ್ಡಿಯಾಗುತ್ತದೆ. ಇದರಿಂದ ಮೂತ್ರಪಿಂಡವನ್ನು ಸಹ ಹಾನಿಗೊಳಿಸುತ್ತದೆ. ಇದರಿಂದ ದೇಹದಲ್ಲಿ ಕೊಳಕು ನೀರು ಸಂಗ್ರಹವಾಗಲು ಪ್ರಾರಂಭವಾಗುತ್ತದೆ ಮತ್ತು ಹೃದಯ ಒತ್ತಡ ಕೂಡ ಹೆಚ್ಚಾಗುತ್ತದೆ.

    ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಮೂಳೆ ಮತ್ತು ಕೀಲುಗಳ ಹಾನಿ, ಮೂತ್ರಪಿಂಡದ ಕಾಯಿಲೆ ಮತ್ತು ಹೃದ್ರೋಗದಂತಹ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಯೂರಿಕ್ ಆಮ್ಲ ಪ್ಯೂರಿನ್​​​ನ ಉಪ-ಉತ್ಪನ್ನವಾಗಿದೆ. ಇದು ದೇಹದಲ್ಲಿ ನೈಸರ್ಗಿಕವಾಗಿ ಸಂಭವಿಸುವ ವಸ್ತು. ಇದು ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಹಾಕಲಾಗುತ್ತದೆ. ಕಿಡ್ನಿಯು ಯೂರಿಕ್ ಆಸಿಡ್ ಅನ್ನು ಹೊರಹಾಕಲು ಸಾಧ್ಯವಾಗದಿದ್ದಾಗ ಅಥವಾ ದೇಹವು ಅದನ್ನು ಹೆಚ್ಚು ಮಾಡುವುದರಿಂದ ಸಮಸ್ಯೆ ಪ್ರಾರಂಭವಾಗುತ್ತದೆ.

    ಹೆಚ್ಚುವರಿ ಯೂರಿಕ್ ಆಮ್ಲ ಹರಳುಗಳನ್ನು ರೂಪಿಸುತ್ತದೆ. ಕೀಲುಗಳ ಸುತ್ತಲೂ ಸಂಗ್ರಹವಾಗಿ ತೀವ್ರವಾದ ನೋವು, ಬಿಗಿತ ಮತ್ತು ಊತವನ್ನು ಉಂಟುಮಾಡುತ್ತದೆ. ಇದು ಅಂತಿಮವಾಗಿ ಹೃದಯ, ಮೂತ್ರಪಿಂಡ ಮತ್ತು ಇತರ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರಬಹುದು.

    ದೇಹದಲ್ಲಿನ ಹೆಚ್ಚಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಆಹಾರದಲ್ಲಿ ಪ್ಯೂರಿನ್ ಅನ್ನು ಕಡಿಮೆ ಮಾಡಬೇಕು. ಹೆಚ್ಚಿನ ಯೂರಿಕ್ ಆಮ್ಲದಿಂದ ಬಳಲುತ್ತಿರುವ ಜನರು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ಏಕೆಂದರೆ ಅವುಗಳಲ್ಲಿ ಕಂಡುಬರುವ ಫ್ರಕ್ಟೋಸ್ ರಕ್ತದಲ್ಲಿ ಯೂರಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಫ್ರಕ್ಟೋಸ್ ವಿವಿಧ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ನೈಸರ್ಗಿಕ ಸಕ್ಕರೆಯಾಗಿದೆ. ಇದು ರಕ್ತದಲ್ಲಿ ಯೂರಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಯಾವ ಪದಾರ್ಥಗಳನ್ನು ತಿನ್ನುವುದರಿಂದ ದೂರವಿರಬೇಕು ಎಂದು ತಿಳಿಸಿದೆ.

    ಇದನ್ನೂ ಓದಿ: ಹೆಚ್ಚಾಗಿ ಹೆದ್ದಾರಿಯಲ್ಲಿ ಡ್ರೈವ್​ ಮಾಡುತ್ತೀರಾ? ಇಲ್ಲಿವೆ 8 ಹೈವೇ ಡ್ರೈವಿಂಗ್​ ಸಲಹೆಗಳು…!

    ಯೂರಿಕ್ ಆಸಿಡ್ ಮಟ್ಟವನ್ನು ಸರಿಯಾಗಿ ಇರಿಸಿಕೊಳ್ಳಲು ಈ ವಸ್ತುಗಳನ್ನು ತಿನ್ನಬಾರದು:

    1) ಗೋಲ್ಡನ್ ಒಣದ್ರಾಕ್ಷಿ
    100 ಗ್ರಾಂಗೆ 26.54 ಗ್ರಾಂ ಫ್ರಕ್ಟೋಸ್
    ಒಣದ್ರಾಕ್ಷಿಗಳನ್ನು ಪ್ಯೂರಿನ್ ಹೊಂದಿರುವ ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಪ್ಯೂರಿನ್ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಗೌಟ್ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ಇದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಸಂಧಿವಾತದಿಂದ ಬಳಲುತ್ತಿರುವ ಜನರು ಈ ಒಣ ಹಣ್ಣುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.

    2) ಹುಣಸೆ ಹಣ್ಣಿನ ತಿರುಳು
    100 ಗ್ರಾಂಗೆ 12.31 ಗ್ರಾಂ ಫ್ರಕ್ಟೋಸ್
    ಹುಣಸೆ ಹಣ್ಣಿನ ತಿರುಳು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಗೌಟ್ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದನ್ನು ಶಿಫಾರಸು ಮಾಡುವುದಿಲ್ಲ. ಫ್ರಕ್ಟೋಸ್ ಅಂಶವು ಯೂರಿಕ್ ಆಮ್ಲದ ಉತ್ಪಾದನೆಗಳ ಮೇಲೆ ಕೆಟ್ಟ ಪರಿಣಾಮ ಬೀರಿ ಸಮಸ್ಯೆಯನ್ನು ಉತ್ತೇಜಿಸುತ್ತದೆ.

    3) ಸೇಬು
    100 ಗ್ರಾಂಗೆ ಫ್ರಕ್ಟೋಸ್: 8.52 ಗ್ರಾಂ
    ಸೇಬುಗಳು ನೈಸರ್ಗಿಕ ಫ್ರಕ್ಟೋಸ್ನ ಉಗ್ರಾಣವಾಗಿದೆ. ಸೇಬುಗಳ ಹೆಚ್ಚಿನ ಸೇವನೆಯು ಗೌಟ್ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

    4) ಖರ್ಜೂರ
    100 ಗ್ರಾಂಗೆ 15.04 ಗ್ರಾಂ ಫ್ರಕ್ಟೋಸ್
    ಖರ್ಜೂರವು ಕಡಿಮೆ ಪ್ಯೂರಿನ್ ಹೊಂದಿರುವ ಹಣ್ಣು ಆದರೆ ಅದರಲ್ಲಿ ಫ್ರಕ್ಟೋಸ್ ಪ್ರಮಾಣ ಹೆಚ್ಚು. ಖರ್ಜೂರವನ್ನು ಸೇವಿಸುವುದು ಅಪಾಯಕಾರಿ. ಏಕೆಂದರೆ ಅವು ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಏರುಪೇರು ಮಾಡಬಹುದು.

    5) ಚಿಕು
    100 ಗ್ರಾಂಗೆ 8.6 ಗ್ರಾಂ ಫ್ರಕ್ಟೋಸ್
    ಚಿಕು ಹಣ್ಣನ್ನು ಹೆಚ್ಚಿನ ಫ್ರಕ್ಟೋಸ್ ಇರುವ ಆಹಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಚೀಕುವನ್ನು ದೂರವಿಡುವುದು ಉತ್ತಮ.

    ಇದನ್ನು ತಿಳಿದ ಬಳಿಕ ಯಾವ ಹಣ್ಣನ್ನು ತಿನ್ನಬೇಕು ಎಂದು ಅನಿಸುವುದು ಸಹಜ. ಕಡಿಮೆ ಫ್ರಕ್ಟೋಸ್ ಮಟ್ಟವನ್ನು ಹೊಂದಿರುವ ಆಹಾರಗಳು ಕೂಡ ಲಭ್ಯವಿದೆ. ಈ ಹಣ್ಣುಗಳನ್ನು ಸೇವಿಸುವುದರಿಂದ ಯೂರಿಕ್​​ ಆಮ್ಲದ ಮಟ್ಟವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಅವುಗಳ ಪಟ್ಟಿ ಕೆಳಗೆ ಲಭ್ಯವಿದೆ.
    1) ಕಪ್ಪು ದ್ರಾಕ್ಷಿ
    2) ನಲ್ಲಿಕಾಯಿ
    3) ಕಲ್ಲಂಗಡಿ
    4) ಪೀಚ್​​
    5) ಅನಾನಸ್​
    6) ದಾಳಿಂಬೆ
    7) ಸ್ಟ್ರಾಬೆರಿ

    ಯೂರಿಕ್​ ಆಮ್ಲದ ಮಟ್ಟವನ್ನು ತಗ್ಗಿಸಲು ಸಕ್ಕರೆ ಅಂಶ ಹೆಚ್ಚಾಗಿರುವ ಸೋಡ ಮತ್ತು ತಂಪು ಪಾನೀಯಗಳನ್ನು ದೂರವಿಡಬೇಕು. ಅದರೊಂದಿಗೆ ಫ್ರುಕ್ಟೋಸ್​​ ಹೆಚ್ಚಿರುವ ಆಹಾರಗಳನ್ನು ಮತ್ತು ಆಲ್ಕೋಹಾಲ್ಯುಕ್ತ ಪಾನೀಯಗಳನ್ನು ಮುಟ್ಟಲೇಬಾರದು.(ಎಜೆನ್ಸೀಸ್​​)

    ನಟ ಶರತ್​ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts