More

    ಚಿನ್ನದ ಪದಕ ಬಾಚಿಕೊಂಡ ಸಂಭ್ರಮದಲ್ಲಿ ಗಾರೆ ಕೆಲಸಗಾರನ ಪುತ್ರಿ…

    ದಾವಣಗೆರೆ: ಕೋವಿಡ್ ಆತಂಕ, ಪ್ರಮುಖರ ಅನುಪಸ್ಥಿತಿಯ ನಡುವೆ ಆನ್‌ಲೈನ್ ತಂತ್ರಜ್ಞಾನವನ್ನು ಬಳಸಿಕೊಂಡು ದಾವಣಗೆರೆ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವವನ್ನು ಬುಧವಾರ ನಡೆಸಲಾಯಿತು.

    ಬಿಪಿಇಡಿ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದಿರುವ ತುಮಕೂರು ಜಿಲ್ಲೆ ವಿ.ಜಿ. ಪಾಳ್ಯದ ಅರ್ಪಿತಾ ವಿ.ಕೆ. ಒಂದು ಚಿನ್ನದ ಪದಕ ಸ್ವೀಕರಿಸಿದರು. ಬಡತನದ ಹಿನ್ನೆಲೆಯ ಅವರ ತಂದೆ ಕುಮಾರ್ ಗಾರೆ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ತಾಯಿ ಸರಸಮ್ಮ ಗೃಹಿಣಿ. ಸ್ವತಃ ಕಬಡ್ಡಿ ಪಟುವಾಗಿರುವ ಅರ್ಪಿತಾ ಮಲ್ಲಾಡಿಹಳ್ಳಿಯ ಸೆಂಟಿನರಿ ಕಾಲೇಜ್ ಆಫ್ ಫಿಜಿಕಲ್ ಎಜುಕೇಶನ್‌ನಲ್ಲಿ ಬಿಪಿಇಡಿ ವ್ಯಾಸಂಗ ಮಾಡಿದ್ದಾರೆ. ‘‘ಓದು ಮುಂದುವರಿಸಲು ಆರ್ಥಿಕ ಸಮಸ್ಯೆ ಇರುವುದರಿಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೇನೆ. ಅದೇ ವೃತ್ತಿಯಲ್ಲೇ ಉತ್ತಮ ಸಾಧನೆ ಮಾಡುವ ಉದ್ದೇಶ ಹೊಂದಿದ್ದೇನೆ’’ ಎನ್ನುತ್ತಾರೆ ಅರ್ಪಿತಾ.

    ಇದನ್ನೂ ಓದಿ: ನಾಳೆಯಿಂದ ದೇಶದಲ್ಲಿ ಅನ್​ಲಾಕ್​-5: ಹೀಗಿದೆ ನೋಡಿ ಕೇಂದ್ರದ ಹೊಸ ಮಾರ್ಗಸೂಚಿ

    ಜಂಬುಲಿಂಗನಹಳ್ಳಿಯ ಅಕ್ಷತಾ ಜಿ.ವಿ. ದಾವಣಗೆರೆಯ ಎಂ.ಎಸ್.ಬಿ. ಕಾಲೇಜಿನಲ್ಲಿ ಓದಿ ಬಿಎ ಪದವಿಯಲ್ಲಿ ಮೊದಲ ರ‌್ಯಾಂಕ್ ಗಳಿಸಿದ್ದು, 3 ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡರು. ತಂದೆ ವೆಂಕಟೇಶ್ ಖಾಸಗಿ ಬಸ್ ಚಾಲಕ. ತಾಯಿ ವಿಜಯಲಕ್ಷ್ಮೀ ಅಂಗನವಾಡಿ ಶಿಕ್ಷಕಿ. ಅವರ ಮನೆಯಲ್ಲಿ ನಾಲ್ವರು ಹೆಣ್ಣು ಮಕ್ಕಳು. ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೆ. ಬಡತನದ ಹಿನ್ನೆಲೆಯ ಕುಟುಂಬದಿಂದ ಬಂದ, ಹರಪನಹಳ್ಳಿ ತಾಲೂಕಿನವರಾದ ಅವರು, ಕೆಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ನಮ್ಮ ದೇಶದ ಬಾಹ್ಯಸಾಲ ಎಷ್ಟಿರಬಹುದು ಅನ್ನೋ ಅಂದಾಜಿದೆಯಾ?

    ಬಳ್ಳಾರಿ ಜಿಲ್ಲೆ ಕೋಗಳಿಯ ಅಕ್ಷತಾ ಕೆ.ಎನ್. ಎಂಬಿಎ ಎಚ್‌ಆರ್‌ನಲ್ಲಿ ಒಂದು ಪದಕ ಪಡೆದಿದ್ದಾರೆ. ಪಿಎಚ್.ಡಿ ಮಾಡಿ ಉಪನ್ಯಾಸಕಿ ಆಗುವುದು ಅವರ ಆಸೆ. ಮಡಿಕೇರಿ ಮೂಲದ ಪೊನ್ನಣ್ಣ ಎಂ.ಬಿ. ಎಂಎಸ್ಸಿ ಮೈಕ್ರೋಬಯಾಲಜಿ ವಿಷಯದಲ್ಲಿ ಮೊದಲ ರ‌್ಯಾಂಕ್ ಗಳಿಸಿದ್ದಾರೆ. ತಂದೆ ಬೋಪಣ್ಣ ಕಾಫಿ ಎಸ್ಟೇಟ್ ಮಾಲೀಕರು. ಪ್ರಸ್ತುತ ಬೆಂಗಳೂರಿನ ಫಾರ್ಮಾ ಕಂಪನಿಯಲ್ಲಿ ಕಿರಿಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಂಎಸ್ಸಿ ಆಹಾರ ತಂತ್ರಜ್ಞಾನದಲ್ಲಿ ರ‌್ಯಾಂಕ್ ಗಳಿಸಿರುವ ಲೇಖನಾ ಎಸ್.ಎಂ. ಆಹಾರ ಸಂಸ್ಕರಣೆ ವಿಷಯದಲ್ಲಿ ಸಂಶೋಧನೆ ಮಾಡಿ ಉದ್ಯಮಿಯಾಗುವ ಗುರಿ ಇಟ್ಟುಕೊಂಡಿದ್ದಾರೆ.

    ಇದನ್ನೂ ಓದಿ: ‘ನಿಮ್ ಕಾಲು ಹಿಡ್ಕೋತಿನಿ ಬಿಟ್ಬಿಡಿ ಸರ್’ ಎಂದು ಅತ್ತ ಹಿರಿಯ ಅಧಿಕಾರಿ!

    ರಾಣೇಬೆನ್ನೂರು ಬಳಿಯ ಯಡಿಯಾಲದ ಉಮಾಮಹೇಶ್ವರಿ ಆರ್. ಕೊಳ್ಳೇರ ಬಿ.ಇಡಿ ನಲ್ಲಿ 2 ಚಿನ್ನದ ಪದಕ ಗಳಿಸಿದ್ದಾರೆ. ಪ್ಯಾರಾಮೆಡಿಕಲ್ ಓದುವ ಆಸೆಯಿದ್ದರೂ ತಂದೆಯ ಇಚ್ಛೆಯಂತೆ ಶಿಕ್ಷಣ ವಿಷಯ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದರು. ಪಿಎಚ್.ಡಿ. ಮಾಡಿದ್ದ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನರಾಗಿದ್ದರಿಂದ ಅವರ ಪರವಾಗಿ ಅವರ ಪತ್ನಿಯು ಪದವಿಯನ್ನು ಸ್ವೀಕರಿಸಿದರು.

    ಇದನ್ನೂ ಓದಿ:  ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ; ಸಿಐಡಿ ತನಿಖೆಯಲ್ಲಿ ಬಯಲಾದ ಸ್ಫೋಟಕ ವಿಚಾರ

    ಘಟಿಕೋತ್ಸವದಲ್ಲಿ ಹರಪನಹಳ್ಳಿ ತಾಲೂಕು ಹಲುವಾಗಲು ಕ್ಷೇತ್ರದ ಜಿ.ಪಂ. ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಪಿಎಚ್.ಡಿ. ಪದವಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ನಾನು ಈ ಹಿಂದೆ ಉಪನ್ಯಾಸಕಿಯಾಗಿದ್ದೆ. ಜಿ.ಪಂ. ಸದಸ್ಯೆಯಾದ ನಂತರ ಪಿಎಚ್.ಡಿ. ಅಧ್ಯಯನ ಮುಂದುವರಿಸಿದೆ. ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳ ಕುರಿತು ಸಂಶೋಧನೆ ಮಾಡಿರುವುದಾಗಿ ಸುವರ್ಣಾ ನಾಗರಾಜ್ ತಿಳಿಸಿದರು.

    ಇದನ್ನೂ ಓದಿ:  ವಿದ್ಯಾರ್ಥಿಗಳೇ, ಸದ್ಯಕ್ಕೆ ನೀವು ಶಾಲಾ-ಕಾಲೇಜುಗಳಿಗೆ ಹೋಗುವಂತಿಲ್ಲ!

    ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಆನ್‌ಲೈನ್‌ನಲ್ಲೇ ಘಟಿಕೋತ್ಸವ ಭಾಷಣ ಮಾಡಿದರು. ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ ತಮ್ಮ ನಿವಾಸದಿಂದಲೇ ಆನ್‌ಲೈನ್ ಮೂಲಕ ಸ್ವಾಗತ ಭಾಷಣ ನೆರವೇರಿಸಿದರು. ಗೌರವ ಡಾಕ್ಟರೇಟ್ ಸ್ವೀಕರಿಸಬೇಕಿದ್ದ ಕಲಬುರಗಿಯ ಶರಣಬಸವ ವಿವಿಯ ಆಡಳಿತ ಮಂಡಳಿ ಸದಸ್ಯೆ ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಅವರೂ ಬಂದಿರಲಿಲ್ಲ.

    ಮಾಸ್ಕ್‌ ಧರಿಸದೇ ಇದ್ದರೆ 1000 ರೂ. ದಂಡ; ಗ್ರಾಮೀಣ ಭಾಗದಲ್ಲಿ 500 ರೂ. ಫೈನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts