More

    ಶೋಷಣೆ ನಿರ್ಮೂಲನೆ ಮಾಡಲು ಸಂವಿಧಾನ ರಚನೆ

    ಶ್ರೀರಂಗಪಟ್ಟಣ: ಸಮಾಜದಲ್ಲಿ ತಾವು ಅನುಭವಿಸಿದ ಶೋಷಣೆಯನ್ನು ಶಿಕ್ಷಣದಿಂದ ತೊಡೆದುಹಾಕಲು ಡಾ.ಅಂಬೇಡ್ಕರ್ ಅವರು ರಚಿಸಿದ ಮಹಾಗ್ರಂಥವನ್ನು ತಿಳಿದುಕೊಳ್ಳುವುದು ಭಾರತೀಯರಾದ ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
    ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ಅಂಬೇಡ್ಕರ್ ಒಕ್ಕೂಟ ಹಾಗೂ ದಸಂಸ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ತುಳಿತಕ್ಕೆ ಒಳಗಾದ ಪ್ರತಿಯೊಬ್ಬರು ದಲಿತರಾಗಿದ್ದಾರೆ. ಡಾ.ಅಂಬೇಡ್ಕರ್ ಅವರು ಪ್ರತಿಯೊಂದು ಸಮುದಾಯ, ಧರ್ಮ, ವರ್ಗಗಳ ಜನರ ರಕ್ಷಣೆಗಾಗಿ ಹಾಗೂ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಯಾವುದೇ ಸ್ವಾರ್ಥ, ಆಸೆ, ಆಮಿಷಗಳಿಗೆ ಒಳಗಾಗದೆ ಈ ಸಂವಿಧಾನದ ಮೂಲಕ ಪರಾಮಾಧಿಕಾರ ನೀಡಿದ್ದಾರೆ. ಇದನ್ನು ನಾವು ಗೌರವಿಸುವ ಜತೆಗೆ ನೀತಿ ನಿಯಮಗಳನ್ನು ತಿಳಿದು ಪಾಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.

    ಪ್ರೊ.ಹುಲ್ಕೆರೆ ಮಹದೇವು ಅವರು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಜಾಗೃತಿ ಸಂದೇಶವನ್ನು ನೀಡಿದರು. ವಸತಿ ಇಲಾಖೆ ಜಂಟಿ ಕಾರ್ಯದರ್ಶಿ ಸಿ.ಶಿವಣ್ಣ, ಪಿಎಸ್‌ಐ ಶಿವಲಿಂಗ ದಳವಾಯಿ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಮುಖಂಡ ಹುರುಳಿಕ್ಯಾತನಹಳ್ಳಿ ಶಿವಕುಮಾರ್, ಕೆ.ಶೆಟ್ಟಹಳ್ಳಿ ಗಂಗಾಧರ್, ಎಂ.ಶೆಟ್ಟಹಳ್ಳಿ ಬಸವಯ್ಯ, ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರು, ಮುಖಂಡ ಪಾಂಡು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts