More

    ಸಂವಿಧಾನ ನೀತಿ, ನಿಯಮಗಳ ಗುಚ್ಛ

    ಕೊಪ್ಪ: ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಸೇವೆ ಹೇಗಿರಬೇಕು ಹಾಗೂ ಯಾವ ನೀತಿ, ನಿಯಮ ಪಾಲಿಸಬೇಕು ಎಂಬ ಮಾಹಿತಿ ಗುಚ್ಛವೇ ಸಂವಿಧಾನ ಎಂದು ತಹಸೀಲ್ದಾರ್ ಮಂಜುಳಾ ವಿಶ್ಲೇಷಿಸಿದರು.

    ಪಟ್ಟಣದ ಲಾಲ್ ಬಹಾದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನದಿಂದ ದೇಶದ ಜನರಿಗೆ ಆತ್ಮವಿಶ್ವಾಸ ಹೆಚ್ಚಾಯಿತು. ಪಂಚವಾರ್ಷಿಕ ಯೋಜನೆಗಳು ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡುಹೋದವು. ಸಾಕ್ಷರತಾ ಪ್ರಮಾಣ ಹೆಚ್ಚಿತು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳು ನಡೆದವು ಎಂದರು. ಸಮಾಜಕಲ್ಯಾಣ ಇಲಾಖೆ ಎ.ಕೆ.ಪಾಟೀಲ್, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ರಾಜಾಶಂಕರ್ ಮಾತನಾಡಿದರು. ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಂತಾದ ತಂಡಗಳಿಂದ ಪಥ ಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಶಾರದಾ ವಿದ್ಯಾ ಮಂದಿರ ಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಸಾರುವ ಹುಲಿ ನೃತ್ಯಕ್ಕೆ ಸಾರ್ವಜನಿಕರು, ಸಭಿಕರು ಫಿದವಾದರು. ತಹಸೀಲ್ದಾರ್ ಮಂಜುಳಾ ವೇದಿಕೆಯಿಂದ ಇಳಿದು ಮಕ್ಕಳ ಜತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಭೆಯಲ್ಲಿ ಇದ್ದವರು ಮಕ್ಕಳಿಗೆ 2000 ರೂಪಾಯಿ ಬಹುಮಾನ ನೀಡಿದರು.
    ಬಿಇಒ ಜ್ಯೋತಿ, ಕಸಾಪ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಪಪಂ ಮುಖ್ಯಾಧಿಕಾರಿ ಎ.ಚಂದ್ರಕಾಂತ್, ಪಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts