More

    ಜಗತ್ತಿನ ಶ್ರೇಷ್ಠ ಗ್ರಂಥ ಸಂವಿಧಾನ

    ಗುರುಗುಂಟಾ: ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಪಂ ಶನಿವಾರ ಅದ್ದೂರಿಯಾಗಿ ಸ್ವಾಗತಿಸಿತು. ನಂತರ ಗ್ರಾಮದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಾಯಿತು.

    ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಗದೀಪ್ ಧನಕರ್ ತೀವ್ರ ಆಕ್ರೋಶ: ಕಾರಣ ಹೀಗಿದೆ?

    ಕುಂಭ ಹೊತ್ತ ವಿದ್ಯಾರ್ಥಿನಿಯರು, ಅಂಬೇಡ್ಕರ್ ಛದ್ಮವೇಷ ಧರಿಸಿದ ಮಕ್ಕಳು ಹಾಗೂ ಬೈಕ್ ರ‌್ಯಾಲಿ ಮೆರವಣಿಗೆೆಯಲ್ಲಿ ಗಮನ ಸಳೆಯಿತು.
    ಗ್ರಾಮದ ರಂಗಮಂದಿರದ ವೇದಿಕೆ ಸಮಾರಂಭದಲ್ಲಿ ಲಿಂಗಸುಗೂರು ಪ್ರಭಾರಿ ತಹಶೀಲ್ದಾರ್ ಡಾ.ಮಲ್ಲಪ್ಪ ಯರಗೋಳ್, ಸಂಸ್ಥಾನಿಕ ರಾಜಾಸೋಮನಾಥನಾಯಕ ಮಾತನಾಡಿ, ಸರ್ವ ಧರ್ಮಿಯರು ವಾಸಿಸುವ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಅದಕ್ಕೆ ಕಾರಣ ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ. ಜಗತ್ತಿನ ಅತಿ ಶ್ರೇಷ್ಠ ಗ್ರಂಥ ಸಂವಿಧಾನವಾಗಿದೆ. ಅಂಬೇಡ್ಕರ್ ಭಾರತರತ್ನವಲ್ಲ ವಿಶ್ವರತ್ನ ಎಂದು ಬಣ್ಣಿಸಿದರು.

    ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೇಶನಾಯಕ, ಹಟ್ಟಿ ಚಿನ್ನದಗಣಿ ಠಾಣೆ ಪಿಐ ಹೊಸಕೇರಪ್ಪ, ದಲಿತ ಮುಖಂಡ ಶಿವಪ್ಪ ಮಾಚನೂರು, ಲಿಂಗಸಗೂರು ತಾಪಂ ಇ ಅಮರೇಶ ಯಾದವ್, ಜಿಲ್ಲಾ ನೋಡಲ್ ಅಧಿಕಾರಿ ಶರಣಪ್ಪ ಪಟ್ಟೇದ್, ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ್, ಸಮಾಜ ಕಲ್ಯಾಣ ಅಧಿಕಾರಿ ಉಮೇಶ, ಪಿಡಿಒ ಗೌರಮ್ಮ, ಉಪತಹಶೀಲ್ದಾರ್ ರಂಗಪ್ಪ ನಾಯಕ, ಕಂದಾಯ ನಿರೀಕ್ಷಕ ರಾಘವೇಂದ್ರ ಇತರರಿದ್ದರು.
    ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕುಮಾರಿ ಶಕುಂತಲಾ ಭಾರತ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts