More

    ಭದ್ರಾವತಿಯಾದ್ಯಂತ ಸಂವಿಧಾನ ಜಾಗೃತಿ ರಥಯಾತ್ರೆ ಸಂಚಾರ

    ಭದ್ರಾವತಿ: ಭಾರತದ ಸಂವಿಧಾನ ಅರಿಗೆ ಬಂದು 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಸಲುವಾಗಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಫೆ.19ರಂದು ನಗರಕ್ಕೆ ಆಗಮಿಸಲಿದೆ. ಫೆ.23ರವರೆಗೂ ತಾಲೂಕಿನ ಪ್ರತಿ ಗ್ರಾಮ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದು ತಹಸೀಲ್ದಾರ್ ಕೆ.ಆರ್.ನಾಗರಾಜ್ ಹೇಳಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ 2 ಮಾರ್ಗವಾಗಿ ಎರಡು ಜಾಗೃತಿ ರಥ(ಟ್ಯಾಬ್ಲೋ) ಆಗಮಿಸಲಿದ್ದು, ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಹೊಳೆಹೊನ್ನೂರು ಭಾಗದ ಸಿದ್ಲಿಪುರ ಗ್ರಾಮಕ್ಕೆ ಸಂಜೆ 5 ಗಂಟೆಗೆ, ಕಸಬಾ ಹೋಬಳಿಯ ಹಿರಿಯೂರು ಗ್ರಾಮಕ್ಕೆ ಬೆಳಗ್ಗೆ 7.30ಕ್ಕೆ ಆಗಮಿಸುವ ರಥಯಾತ್ರೆಗೆ ಸ್ಥಳೀಯ ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಬಿ.ಕೆ,.ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ ಎಂದರು.
    ಕೊನೆಯ ದಿನವಾದ ಫೆ.23ರಂದು ಬೆಳಗ್ಗೆ 9.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಳ್ಳುವ ರಥಯಾತ್ರೆ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕನಕ ಮಂಟಪದ ತಲುಪಲಿದೆ. ಕನಕಮಂಟಪ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆಯಲ್ಲಿ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಶಿಕ್ಷಕರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
    ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಬಿಇಒ ಎ.ಕೆ.ನಾಗೇಂದ್ರಪ್ಪ, ತಾಪಂನ ಉಪೇಂದ್ರ, ಸಹಾಯಕ ನಿರ್ದೇಶಕ ನಟರಾಜ್, ಸಮಾಜ ಕಲ್ಯಾಣ ಇಲಾಖೆಯ ಗೋಪಾಲಪ್ಪ, ಡಿಎಸ್‌ಎಸ್ ಮುಖಂಡ ರಂಗನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts