More

    ಪೈಲ್ವಾನ್ ಸುಶೀಲ್ ಕುಮಾರ್ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದ ವಕೀಲರು

    ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಜಯಿಸುವ ಮೂಲಕ ದೇಶದ ಮನೆ ಮಾತಾಗಿದ್ದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್, ಕಳೆದ ಇಪ್ಪತ್ತು ದಿನಗಳಿಂದ ಕಳಂಕಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. 23 ವರ್ಷದ ರೆಸ್ಲರ್ ಸಾಗರ್ ರಾಣಾ ಎಂಬುವರ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಸುಶೀಲ್ ಕುಮಾರ್, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೆ, ಸುಶೀಲ್ ಕುಮಾರ್ ಮೇಲಿರುವ ಆರೋಪವನ್ನು ನಿರಾಕರಿಸಿರುವ ಅವರ ವಕೀಲರಾದ ಬಿಎಸ್ ಜಕ್ಕರ್, ಇದೊಂದು ವ್ಯವಸ್ಥಿತ ಪಿತೂರಿ ಮಾಡಲಾಗಿದೆ ಎಂದು ದೂರಿದ್ದಾರೆ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಕಿವೀಸ್​ಗೆ ಚೇತೇಶ್ವರ ಪೂಜಾರ ಎಚ್ಚರಿಕೆ!

    ಸ್ಟೇಡಿಯಂ ಹೊರಗೆ ಎರಡು ಗುಂಪುಗಳ ನಡುವೆ ಕೇವಲ ಗಲಾಟೆಯಷ್ಟೇ ನಡೆದಿದೆ. ಆದರೆ, ಕೊಲೆ ಪ್ರಕರಣಕ್ಕೂ ಸುಶೀಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವಕೀಲರು ಸಮರ್ಥಿಸಿಕೊಂಡಿದ್ದಾರೆ. ಎರಡು ಗುಂಪುಗಳ ನಡುವಿನ ಗಲಾಟೆಯನ್ನು ಸುಶೀಲ್ ನಿಯಂತ್ರಿಸಲು ಯತ್ನಿಸಿದರು. ಆದರೆ, ಪರಿಸ್ಥಿತಿ ಕೈಮೀರಿತ್ತು ಎಂದು ಹೇಳಿದ್ದಾರೆ. ಮೇ 4 ರಂದು ಛಾತ್ರಾಸಾಲ್ ಸ್ಟೇಡಿಯಂ ಆವರಣದಲ್ಲಿ ಸಾಗರ್ ರಾಣಾ ಎಂಬುರವ ಕೊಲೆ ನಡೆದಿತ್ತು. ಘಟನೆ ನಡೆದ ಬಳಿಕ ಸುಶೀಲ್ ಕುಮಾರ್ ಹಾಗೂ ಸಂಗಡಿಗರು ತಲೆಮರೆಸಿಕೊಂಡಿದ್ದರು.

    ಇದನ್ನೂ ಓದಿ: ಆಟೋ ಚಾಲಕರಿಗೆ ಆಹಾರದ ಕಿಟ್​ ನೀಡಿ ನೆರವಾದ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​

    ದೆಹಲಿ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಬೇಕಂತಲೇ ಟಾರ್ಗೆಟ್ ಮಾಡಿದ್ದಾರೆ ಎಂದು ವಕೀಲರಾದ ಬಿಎಸ್ ಜಕ್ಕರ್ ದೂರಿದರು. ಕೇವಲ 10 ದಿನಗಳಲ್ಲಿ ಪೊಲೀಸರು ಜಾಮೀರು ರಹಿತ ವಾರೆಂಟ್ ಜಾರಿದ್ದಾರೆ. ಅವರ ಪತ್ನಿ ವಿರುದ್ಧವೂ ಕೇಸು ದಾಖಲಿಸಿ, ಸುಶೀಲ್ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಸುಶೀಲ್ ತಪ್ಪು ಮಾಡದ ಕಾರಣ ಯಾವುದೇ ಪತ್ರಕ್ಕೂ ಸಹಿ ಹಾಕಲಿಲ್ಲ ಎಂದು ವಕೀಲರು ಹೇಳಿದ್ದಾರೆ. 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಪದಕ ಜಯಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts