More

    ಅಂಡರ್‌ ಪಾಸ್‌ ನಿರ್ಮಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆ ನಡೆಸಿದ ಕಾಂಗ್ರೆಸ್ಸಿಗರು

    ಅಂಕೋಲಾ: ಪಟ್ಟಣದ ಹುಲಿದೇವರವಾಡ ಗ್ರಾಮಕ್ಕೆ ಹೋಗಿ-ಬರಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ರಸ್ತೆ ನಿರ್ಮಿಸಿಬೇಕೆಂದು ಆಗ್ರಹಿಸಿ, ಸಾರ್ವಜನಿಕರು ಹುಲಿದೇವರವಾಡ ಸಮೀಪ ಸೋಮವಾರ ರಾ.ಹೆ. 66 ಬಂದ್ ಮಾಡಿ ಪ್ರತಿಭಟಿಸಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಹುಲಿದೇವರವಾಡ ಪುರಸಭೆ ವ್ಯಾಪ್ತಿಯಲ್ಲಿ ಬರುತ್ತಿದ್ದು, ತೀರಾ ಹಿಂದುಳಿದ ಗ್ರಾಮವಾಗಿರುತ್ತದೆ. ಇಲ್ಲಿ ಎಲ್ಲ ಸಮುದಾಯದ ಜನರು ವಾಸವಾಗಿದ್ದು, ದಿನನಿತ್ಯದ ವ್ಯಾಪಾರ ವಹಿವಾಟಿಗೆ ಅಂಕೋಲಾ ಪಟ್ಟಣವನ್ನು ಅವಲಂಬಿಸಿರಬೇಕಾಗಿದೆ.

    ಈ ಭಾಗದಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನ, ಮುಸ್ಲಿಂ ಸಮೂದಾಯದ ಮಸೀದಿ, ಎರಡು ಶಾಲೆಗಳು, ಮತ್ತು ಮುಖ್ಯವಾಗಿ ಸಾಲು ಮರದ ತಿಮ್ಮಕ್ಕ ಪಾರ್ಕ್‌ಗೆ ದಿನಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅಲ್ಲದೆ ಶಾಲೆ, ಕಾಲೇಜ್‌ ವಿದ್ಯಾರ್ಥಿಗಳು ಹೆದ್ದಾರಿ ದಾಟಿ ಹೋಗಬೇಕಾ ಗುತ್ತದೆ. ಈ ಕಾರಣದಿಂದ ಅಂಡರ್ ಪಾಸ್ ರಸ್ತೆ ಅವಶ್ಯ ಎಂದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ರಾ.ಹೆ. 66 ರಲ್ಲಿ ಉ.ಕ.ಕನ್ನಡ ವ್ಯಾಪ್ತಿಯ ಭಟ್ಕಳದಿಂದ ಕಾರವಾರದವರೆಗೆ ಐಆರ್‌ಬಿ ಕಂಪನೆಯವರು ಅವೈಜ್ಞಾನಿಕವಾಗಿ ಚತುಷ್ಪಥ ಹೆದ್ದಾರಿ ನಿರ್ಮಿಸಿದ ಪರಿಣಾಮವಾಗಿ ಮೇ 2018 ರಿಂದ ಜನವರಿ 2019 ರ ವರೆಗೆ ಒಟ್ಟು 882 ಅಪಘಾತ ಸಂಭವಿಸಿದ್ದು, 195 ಮಂದಿ ಮರಣ ಹೊಂದಿದ್ದು, 1541 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅಪಘಾತ ನಡೆದ ಸ್ಥಳದ ಗುರುತಿಸುವಿಕೆಯಲ್ಲಿ ವಾಹನ ಚಾಲಕರ ಜಾಗೃತೆಗಾಗಿ ನಾಮಫಲಕ ಸರಿಯಾಗಿ ಅಳವಡಿಸಿಲ್ಲ. ಅದರಲ್ಲೂ ಟೋಲ್ ಸುಂಕ ಸಂಗ್ರಹಹಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ಅಶೋಕ ಶೆಡಗೇರಿ ಮಾತನಾಡಿದರು. ತಹಸೀಲ್ದಾರ್ ಬಿ.ಜಿ.ಕುಲಕರ್ಣಿ ಮನವಿ ಸ್ವೀಕರಿಸಿದರು. ಜಿಪಂ.ಮಾಜಿ ಸದಸ್ಯ ವಿನೋದ ನಾಯಕ ಮನವಿ ಓದಿದರು.

    ಇದನ್ನೂ ಓದಿ: 17ಬಾರಿ ಇರಿದು ಪತ್ನಿ ಹತ್ಯೆಗೈದ ಭಾರತೀಯನಿಗೆ ಅಮೇರಿಕಾ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?
    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಜಾತಾ ಗಾಂವಕರ, ತಾಲೂಕ ಯುವ ಒಕ್ಕೂ ಟದ ಅಧ್ಯಕ್ಷ ಗೋಪು ಅಡ್ಲೂರು, ಪುರಸಭೆ ಸದಸ್ಯರಾದ ಪ್ರಕಾಶ ಗೌಡ, ಕಾರ್ತಿಕ ನಾಯ್ಕ, ಸಬ್ಬೀರ ಶೇಖ್, ಮಂಗೇಶ ಆಗೇರ, ಮಂಜುನಾಥ ನಾಯ್ಕ,ರೇಖಾ ಗಾಂವಕರ್, ನಾಗರಾಜ ಐಗಳ, ಜಿಪಂ.ಮಾಜಿ ಸದಸ್ಯ ಜಿ. ಎಂ. ಶೆಟ್ಟಿ, ಮಾಜಿ ಶಾಸಕ ಕೆ.ಎಚ್.ಗೌಡ, ಪ್ರಮುಖರಾದ ಉದಯ ನಾಯಕ ಭಾವಿಕೇರಿ, ಶಾಂತಿ ಆಗೇರ, ರಾಜು ಹರಿಕಂತ್ರ ಕಣಗಿಲ್, ಉಮೇಶ ನಾಯ್ಕ ಅಜ್ಜಿಕಟ್ಟಾ, ಸುರೇಶ ನಾಯ್ಕ ಅಸ್ಲಗದ್ದೆ, ನಾರಾಯಣ ನಾಯಕ ಸೂರ್ವೆ, ಸೈಯದ್ ಪಪ್ಪು, ನವಾಜ್ ಶೇಖ್, ಉಪೇಂದ್ರ ನಾಯ್ಕ ಹನುಮಟ್ಟಾ, ಅರುಣ ಹರ್ಕಡೆ, ಸಮೀರ ಖಾನ್, ಅಸ್ಪಾಖ್ ಶೇಖ್, ಸೈರೀಶಾ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.
    ಡಿವೈಎಸ್ಪಿ ವೆಲೈಂಟನ್ ಡಿಸೋಜಾ, ಕಾರವಾರ ಮಹಿಳಾ ಪೊಲೀಸ್ ಠಾಣೆ ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ಉದ್ದಪ್ಪ ಅಶೋಕ ಧರಪ್ಪನವರ ಹಾಗೂ ಸಿಬ್ಬಂದಿ ಬಂದೋಬಸ್ತ್‌ ಕೈಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts