More

    ನಮ್ಮೆಲ್ಲರ ಬಣ ಒಂದೇ ಕಾಂಗ್ರೆಸ್: ಪಕ್ಷ ಸಂಘಟನೆಗೆ ಒತ್ತು ನೀಡಿ ಜಮೀರ್ ಅಹಮ್ಮದ್ ಹೇಳಿಕೆ

    ಚನ್ನಪಟ್ಟಣ: ಅಲ್ಪಸಂಖ್ಯಾತ ಮುಖಂಡರು ಪಕ್ಷ ಸಂಘಟನೆಗೆ ಒತ್ತು ನೀಡಿ, ಪಕ್ಷ ಗೆಲುವು ಸಾಧಿಸಲು ಶ್ರಮಿಸಬೇಕಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
    ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳವಾರ ಚನ್ನಪಟ್ಟಣ ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

    ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ನಮ್ಮೆಲ್ಲರ ಬಣ ಕಾಂಗ್ರೆಸ್ ಒಂದೆ. ನಾವೆಲ್ಲರೂ ಜತೆಗೂಡಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
    ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಒಂದು ಹೆಸರು ಶಿಪಾರಸ್ಸು ಮಾಡಿದ್ದೆ. ಆದರೆ, ಅಷ್ಟರಲ್ಲಿ ಬೇರೆ ನೇಮಕವಾಗಿತ್ತು. ನಮ್ಮದು ಹೈಕಮಾಂಡ್ ನಿರ್ಧಾರ. ಅಲ್ಲಿ ತೀರ್ಮಾನ ಮಾಡಿದ ಮೇಲೆ ಮುಗಿಯಿತು. ಈಗ ಆಯ್ಕೆ ಆಗಿರುವವರ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಅಭಿಮಾನಿ ಮನೆಗೆ ಭೇಟಿ : ನಗರದ ಅಬೀದ್‌ಪುರ ಮೊಹಲ್ಲಾದಲ್ಲಿನ ತಮ್ಮಅಭಿಮಾನಿ ಬಳಗದ ಅಧ್ಯಕ್ಷ ಪೈಲ್ವಾನ್ ಆಕ್ರಂಖಾನ್ ಅವರ ಪುತ್ರಿ ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಜಮೀರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಕಾಂಗ್ರೆಸ್ ಮುಖಂಡ ಅಲ್ತಾಪ್‌ಖಾನ್, ಕೆಪಿಸಿಸಿ ಸದಸ್ಯ ಶರತ್‌ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್‌ಕುಮಾರ್, ನಗರಸಭೆ ಸದಸ್ಯ ವಾಸಿಲ್ ಆಲಿಖಾನ್, ಮಾಜಿ ಸದಸ್ಯರಾದ ಫರೀದ್‌ಖಾನ್ ಘೋರಿ, ಭಾವಸಾ ಮತ್ತಿತರರು ಇದ್ದರು. ರಾಜಕಾರಣಿಗಳಿಗೆ ಜೈಕಾರ ಸಹಜಕಾಂಗ್ರೆಸ್ ಸಭೆಯಲ್ಲಿ ತಮ್ಮ ಪರ ಜೈಕಾರ ಹಾಕಿದ ವಿಚಾರವಾಗಿ ಮಾತನಾಡಿದ ಜಮೀರ್, ಯಾವುದೇ ಪಕ್ಷದ ಸಭೆಯಿರಲಿ, ಅಲ್ಲಿ ರಾಜಕಾರಣಿಗಳಿಗೆ ಜೈಕಾರ ಹಾಕುವುದು ಸಹಜ.

    ದೆಹಲಿಗೆ ಹೋಗಿದ್ದ ಕಾರಣ ನಾನು ಆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ನನ್ನ ಪರ ಜೈಕಾರ ಕೂಗಲಾಗಿದೆ. ಇದು ರಾಜಕೀಯ ಸಭೆಗಳಲ್ಲಿ ಸಹಜ. ನನ್ನ ಅಭಿಮಾನಿಗಳು ಆ ಸಭೆಗೆ ಎಲ್ಲೆಡೆಯಿಂದ ಆಗಮಿಸಿದ್ದರು. ಅವರು ಜೈಕಾರ ಹಾಕಿದ್ದಾರೆ ಅಷ್ಟೇ, ಅದನ್ನ ಬಿಟ್ಟು ಬೇರೆ ಇನ್ನೇನಿಲ್ಲ ಎಂದು ಸಮರ್ಥಿಸಿಕೊಂಡರು. ಇನ್ನು ಬಿಟ್ ಕಾಯಿನ್ ವಿಚಾರವಾಗಿ ತನಿಖೆ ತಡವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಮೀರ್, ಬಿಜೆಪಿ ಸರ್ಕಾರಕ್ಕೆ ಕಿವಿ ಇಲ್ಲ. ಈ ಸರ್ಕಾರಕ್ಕೆ ಯಾವುದೂ ಕೇಳಿಸುವುದಿಲ್ಲ ಎಂದರು. ರಾಮನಗರ: ರೈತರಿಗೆ ಪರಿಹಾರ ನೀಡಲು ಮೀನಮೇಷ ಏಣಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸರ್ಕಾರದ ವಿರುದ್ಧ ಹರಿಯಾಯ್ದರು.

    ರಾಮನಗರಕ್ಕೆ ಖಾಸಗಿ ಭೇಟಿ ನಿಮಿತ್ತ ಮಂಗಳವಾರ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಅಕಾಲಿಕ ಮಳೆಯಿಂದ ರಾಜ್ಯದ ರೈತರು ಹೈರಾಣಾಗಿದ್ದಾರೆ. ಕಟಾವಿಗೆ ಬಂದ ರಾಗಿ, ಭತ್ತ, ತರಕಾರಿ ಬೆಳೆ ಸೇರಿ ತೋಟದ ಬೆಳೆಗಳು ನೀರಿನಿಂದ ನೆಲಕ್ಚಚಿವೆ. ಇಂತಹ ಸಂದರ್ಭದಲ್ಲಿ ರೈತನ ಕೈಹಿಡಿಯಬೇಕಾಗಿದ್ದು ಸರ್ಕಾರದ ಕರ್ತವ್ಯ. ಇಷ್ಟೊಂದು ಅನಾಹುತ ಸಂಭವಿಸಿದರೂ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲದೆ ಕೇವಲ ಉಡಾಫೆ ಉತ್ತರ ನೀಡುತ್ತಾ ಕಾಲಕಳೆಯುತ್ತಿದ್ದಾರೆ ಎಂದರು.

    25 ಸ್ಥಾನಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಬೇಕಿತ್ತು ಕುಮಾರಸ್ವಾಮಿ. ಲಾಭ ಇಲ್ಲದೆ ಯಾವುದೇ
    ಕೆಲಸ ಮಾಡುವುದಿಲ್ಲ. ಕೇವಲ ಏಳು ಸ್ಥಾನಗಳಿಗಷ್ಟೇ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಕೇವಲ ನಾಮ್‌ಕೇವಾಸ್ತೆ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
    ಬಿಜೆಪಿಗೆ ಸಹಾಯ ಮಾಡಲು ಏಳು ಅಭ್ಯರ್ಥಿಗಳನ್ನು ಹಾಕಿದ್ದಾರೆ. ಕೆಲವು ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನದ ವಿಚಾರವಾಗಿ ಮಾತನಾಡಿದ ಜಮೀರ್ ಅಹ್ಮದ್ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆ. ಎಲ್ಲವನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಡಿ.ಕೆ. ಸೀವಕುಮಾರ್ ಮಾತನಾಡಿ ಸರಿಮಾಡುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts