More

    ಕಾಂಗ್ರೆಸ್​ನ ಮೂರನೇ ಪಟ್ಟಿ ನಿರ್ಧಾರ ಮಾಡೋದು ಯಾರು? ಇಂದು ಸಂಜೆ ತಯಾರಿ

    ಬೆಂಗಳೂರು: ಚುನಾವಣಾ ಕಣ ಇನ್ನಷ್ಟು ರಂಗೇರುತ್ತಿದ್ದು ಆಮ್​ ಆದ್ಮಿ ಪಕ್ಷ ಇಂದು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡಗಡೆ ಮಾಡಿದ್ದಾರೆ. ಅದಲ್ಲದೇ ಇಂದೇ ಅಭ್ಯರ್ಥಿಗಳ  ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದೆ.  

    ಇಂದು ಸಂಜೆ ದೆಹಲಿಯಲ್ಲಿ ಸಿಇಸಿ ಸಬ್ ಕಮಿಟಿ ಮೀಟಿಂಗ್ ನಡೆಸಲಿದ್ದು ಈ ಸಂದರ್ಭ ಕಾಂಗ್ರೆಸ್​ನ ‌ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಲಾಗುವುದು ಎನ್ನಲಾಗಿದೆ.

    ಈ ಬಾರಿ ಕಾಂಗ್ರೆಸ್​ ಹೈಕಮಾಂಡ್ ಸಿಇಸಿ ಬಿಟ್ಟು ಸಬ್‌ ಕಮಿಟಿ ಮಾಡಿದೆ. ಸಿಇಸಿಯಲ್ಲಿ ಸದಸ್ಯರು ಹೆಚ್ಚಾದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ರಾಜ್ಯದ ಇಬ್ಬರು ನಾಯಕರಿಗೆ ಮಾತ್ರ ಸಬ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.

    ಕಾಂಗ್ರೆಸ್​ ಪ್ರಮುಖರು ಮಾತ್ರ ನಿರ್ಧಾರ ಮಾಡಲಿದ್ದಾರೆ ಮೂರನೇ ಪಟ್ಟಿ..!

    ಸಿಇಸಿ ಕಮಿಟಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್​ಗೆ ಮಾತ್ರ ಸ್ಥಾನ ನೀಡಲಾಗಿದ್ದು ಎಂ.ಬಿ ಪಾಟೀಲ್, ಪರಮೇಶ್ವರ್, ಹರಿಪಸ್ರಾದ್​ರನ್ನು ಕಾಂಗ್ರೆಸ್​ ಹೈಕಮಾಂಡ್ ಕೈ ಬಿಟ್ಟಿದೆ. ಇನ್ನು ಆ ಕಮಿಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ವೇಣುಗೋಪಾಲ, ಸುರ್ಜೆವಾಲ, ಮುಕುಲ್ ವಾಸ್ನಿಕ್​ಗೆ ಸ್ಥಾನ ಸಿಕ್ಕಿದೆ.

    ಈ ಹೊಸ ಕಮಿಟಿ ಮೂರನೆ ಪಟ್ಟಿಯನ್ನು ತಯಾರಿಸಲಿದ್ದು ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದನ್ನು ಕೇವಲ ಏಳು ಜನರು ಮಾತ್ರ ನಿರ್ಧರಿಸಲಿದ್ದಾರೆ. ಮೂರನೆ ಪಟ್ಟಿಯನ್ನು ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ತಯಾರಿಸಲು ಯೋಜಿಸಲಾಗಿದ್ದು ನಾಳೆಯೇ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts