More

    ಟಿಕೆಟ್ ನೀಡುವಲ್ಲಿ ತಾತ್ಸಾರ ಸಲ್ಲ – ಕಾಗಿನೆಲೆ ಕನಕಗುರು ಗುರುಪೀಠದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ರಾಯಚೂರು
    ಕುರುಬ ಸಮಾಜದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಲ್ಲಿ ತಾತ್ಸಾರ ತೋರಿದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಕಾಗಿನೆಲೆ ಕನಕಗುರು ಗುರುಪೀಠದ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಾಂಗ್ರೆಸ್ ಬಿಡುಗಡೆ ಮಾಡಿದ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಮಾಜದ ಆರು ಜನರಿಗಷ್ಟೇ ಟಿಕೆಟ್ ನೀಡಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರಿಗೆ ಮಾತ್ರ ನೀಡುವ ಮೂಲಕ ಕಡೆಗಣಿಸಲಾಗಿದೆ. ದೇವರಾಜ ಅರಸು ಅವಧಿಯಲ್ಲಿ ಸಮಾಜದ 25ಕ್ಕೂ ಹೆಚ್ಚು ಜನರಿಗೆ ಟಿಕೆಟ್ ನೀಡಲಾಗುತ್ತಿತ್ತು. ನಂತರದಲ್ಲಿ ಇಳಿಮುಖವಾಗುತ್ತಾ ಬಂದಿದೆ. ಹಿಂದುಳಿದ ವರ್ಗಗಳಲ್ಲಿ ಪ್ರಬಲ ಸಮುದಾಯ ಆಗಿರುವ ಕುರುಬ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಲು ಕಾಂಗ್ರೆಸ್ ಮುಂದಾಗಬೇಕು ಎಂದರು.

    ಸ್ವಾಮೀಜಿಗಳು ರಾಜಕೀಯ ಮಾಡಬಾರದು ನಿಜ. ಆದರೆ, ಸಮಾಜದ ಹಿತಕ್ಕಾಗಿ ರಾಜಕೀಯ ಪಕ್ಷಗಳಿಗೆ ಒತ್ತಾಯ ಮಾಡುವುದು ಅನಿವಾರ್ಯವಾಗಿದೆ. ಸಮಾಜದ ಬೇಡಿಕೆಯನ್ನು ತಾತ್ಸಾರ ಮಾಡಿದರೆ ಕಾಂಗ್ರೆಸ್ ನಾಯಕರು ಹೇಗೆ ಚುನಾವಣೆ ಎದುರಿಸುತ್ತಾರೆ ನೋಡುತ್ತೇವೆ. ಎರಡನೇ ಪಟ್ಟಿಯಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡದಿದ್ದಲ್ಲಿ ನಾವೇ ಜನರ ಹತ್ತಿರ ಹೋಗಿ ಮನವಿ ಮಾಡುತ್ತೇವೆ. ಇತರ ಪಕ್ಷಗಳಲ್ಲಿ ಸಮಾಜದ ಟಿಕೆಟ್ ಆಕಾಂಕ್ಷಿಗಳು ಕಡಿಮೆಯಿದ್ದು, ಕಾಂಗ್ರೆಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ಪಕ್ಷದ ನಾಯಕರಿಗೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

    ಕಲ್ಯಾಣ ಕರ್ನಾಟಕ ಭಾಗದ ಟಿಕೆಟ್ ಆಕಾಂಕ್ಷಿಗಳಾದ ಕೆ.ಕರಿಯಪ್ಪ, ರಾಜಶೇಖರ ಹಿಟ್ನಾಳ, ಮುದುಕಪ್ಪ, ಪಂಡಿತರಾವ್ ಚಿದ್ರಿ, ಪರಶುರಾಮಪ್ಪ, ಗುರುನಾಥ ಪೂಜಾರಿ, ಜೆ.ಎಂ.ಕೊರಬು, ಹನುಮಂತಪ್ಪ, ವಿಶ್ವನಾಥ, ಡಾ.ಭೀಮಣ್ಣ, ಶರಣಪ್ಪ ಸದಲಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts