More

    ಗದಗ: ಜಿ.ಎಸ್. ಪಾಟೀಲರಿಗೆ ಟಿಕೆಟ್ ಘೋಷಣೆ

    ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಆರಂಭಗೊಂಡ ಎರಡನೇ ಹಂತದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಂಗಳವಾರ ಜಿಲ್ಲೆಯ ರೋಣ ಮತ್ತು ನರಗುಂದ ಕ್ಷೇತ್ರದಲ್ಲಿ ಜರುಗಿತು. ಎಂದಿನಂತೆ ಸ್ವಾತಂತ್ರ್ಯ ಹೋರಾಟ, ಬ್ಯಾಂಕ್ ರಾಷ್ಟ್ರೀಕರಣ, ಊಳುವವನೇ ಭೂ ಒಡೆಯ ನೀತಿ ಜಾರಿಯನ್ನು ಕಾಂಗ್ರೆಸ್ ಮುಖಂಡರು ಪುನರುಚ್ಚರಿಸಿದರು.

    ರೋಣ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮತ್ತೇ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ 5000 ಕೋಟಿ ಮೀಸಲಿಡುತ್ತೇವೆ ಎಂದು ಘೋಷಿಸಿದರು.

    ಕೃಷಿ ಭಾಗ್ಯ ಯೋಜನೆ ಜಾರಿತಂದು ಲಕ್ಷಾಂತರ ಕೃಷಿಹೊಂಡ ನಿರ್ಮಾಣವನ್ನು ಕಾಂಗ್ರೆಸ್ ಮಾಡಿದೆ. ಈ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಕೃಷಿ ಪತ್ತಿನ ಸಂಘಗಳ ಸಾಲ, ಮಹಿಳಾ ಸಾಲ, ದೇವರಾಜು ಅರಸು ನಿಮಗದ ಸಾಲ ಮನ್ನಾ ಮಾಡಿದ್ದೇನೆ ಎಂದ ಅವರು ನೇಮಕಾತಿ, ವರ್ಗಾವಣೆ, ಟೆಂಡರ್ ಪ್ರಕ್ರಿಯೆ, ಶಿಕ್ಷಣ ಸಂಸ್ಥೆಗಳಲ್ಲಿ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲೂ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ಆರೋಪಿಸಿದರು.

    ಟಿಕೆಟ್ ಘೋಷಣೆ:
    ಜಿ.ಎಸ್. ಪಾಟೀಲರಿಗೆ ಈ ಬಾರಿ ಟಿಕೆಟ್ ನಿಶ್ಚಿತ. ಈ ಬಾರಿ ಪಾಟೀಲರೇ ನಮ್ಮ ಅಭ್ಯರ್ಥಿ. ಸಜ್ಜನ ರಾಜಕಾರಣಿ ಜಿ.ಎಸ್. ಪಾಟೀಲರ ಕ್ಷೇತ್ರಕ್ಕೆ 3500 ಕೋಟಿ ಅನುದಾನ ಕೊಟ್ಟಿದ್ದೆ. ಅಪಪ್ರಚಾರ ಮಾಡಿ ಸೋಲಿಸಿದರು. ಈ ಬಾರಿ ತಪ್ಪು ಮರುಕಳಿಸದಂತೆ ಮತದಾನ ಮಾಡಿ.

    ಬಿ.ಆರ್. ಯಾವಗಲ್, ಜಿ.ಎಸ್.ಪಾಟೀಲ, ಎಚ್.ಕೆ. ಪಾಟೀಲ, ಆರ್.ಎಸ್. ಪಾಟೀಲ, ಸಲೀಂ ಅಹಮ್ಮದ್, ಪ್ರಕಾಶ್ ರಾಥೋಡ್, ಐ.ಜಿ. ಸನದಿ, ಜಿ.ಎಸ್. ಗಡ್ಡದೇವರಮಠ, ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ ಇದ್ದರು

    ಕೋಟ್:
    ಸಿದ್ದರಾಮಯ್ಯ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದ ಬಡವರು ಅವರ ಜತೆಗಿದ್ದಾರೆ. ಆಶ್ರಯ ಮನೆ ಸಾಲ ಸೇರಿದಂತೆ ಇತರೆ 4500 ಕೋಟಿ ಬಡವರ ಸಾಲವನ್ನು ಮನ್ನಾ ಮಾಡಿದ್ದಾರೆ. ಆಶ್ರಯ ಮನೆಗಳ ವಿದ್ಯುತ್ ಬಿಲ್ ಅನ್ನು ಕೂಡ ಮನ್ನಾ ಮಾಡಿದವರು ಸಿದ್ದರಾಮಯ್ಯನವರು. ಈ ಯೋಜನೆಗಳನ್ನು ಕಾರ್ಯಕರ್ತರು, ಮುಖಂಡರು ಪದೇ ಪದೆ ನೆನಪಿಸಿ ಕೊಡಬೇಕಾಗುತ್ತದೆ. ಮತದಾರರು ಎಲ್ಲವನ್ನು ಮರೆಯುತ್ತಾರೆ ಎಂಬುದು ಬೇಸರ. ಹಲವು ಯೋಜನೆಗಳನ್ನು ಕೊಟ್ಟ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಸಿಎಂ ಮಾಡಲಿಲ್ಲ ಎಂಬುದು ನೋವು ತಂದಿದೆ.

    ಜಿ.ಎಸ್. ಪಾಟೀಲ

    ಜಿ.ಎಸ್. ಪಾಟೀಲ ಹೈಲೆಟ್ಸ್ ಭಾಷಣ.

    • ಸಿಂಗಟಾಲೂರು ಯೋಜನೆಗೆ ಸಿದ್ದರಾಮಯ್ಯ ಸಾವಿರಾರು ಕೋಟಿ.
    • ಹನಿ ನೀರಾವರಿಗೆ 5000 ಕೋಟಿ
    • ಕೆರೆಗಳ ಅಭಿವೃದ್ಧಿಗೆ 1048 ಕೋಟಿ
    • ಆಶ್ರಯ ಮನೆಗಳ ನಿರ್ಮಾಣ, ಮನೆಗಳ 4500 ಕೋಟಿ ಸಾಲಮನ್ನಾ ಹಾಗೂ ವಿದ್ಯುತ್ ಬಿಲ್ ಮಾಫಿ

    ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ, ರಾಯಣ್ಣ ಮೂರ್ತಿ ನೀಡಿ ಗೌರವಿಸಲಾಯಿತು.

    ಬಾಕ್ಸ್:
    ರಾಯ್ಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ರಿ ಹಿಡಿಯದೇ ಬಿಸಿಲಲ್ಲಿ ನಿಲ್ಲಿಸಿದ್ಸನ್ನು ನರೇಂದ್ರ ಮೋದಿ ಪ್ರಶ್ನಿಸುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲೂ ಬಿಜೆಪಿ ಮೇಲೆ ವಾಕ್ಸಮರ ಶುರುವಾಗಿದೆ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಸಿಎಂ ಸ್ಥಾನ ಕಸಿದುಕೊಂಡಿರಿ ಎಂದು ವೇದಿಕೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಮುಖಂಡರು ದೂರಿದರು.

    ಭಾಷಾತಂತ್ರ ಗಾಳ
    ಜಿಲ್ಲೆಯಲ್ಲಿ ಲಂಬಾಣಿ ಸಮುದಾಯದ ಅಧಿಕ ಮತದಾರರು ಇರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ ಲಂಬಾಣಿ ಗಾಳ ಉರುಳು ಬಿಟ್ಟಿದೆ. ಈ ಸಮುದಾಯದ ಮುಖಂಡ ಪ್ರಕಾಶ ರಾಥೋಡ್ ವೇದಿಕೆಯಲ್ಲಿ ಲಂಬಾಣಿ ಭಾಷೆಯಲ್ಲೇ ಭಾಷಣ ಮಾಡಿದರು.
    ಉರ್ದು ಭಾಷೆಯಲ್ಲಿ ನಮಸ್ತೆ ಹೇಳುವ ಮೂಲಕ ಜಮೀರ್ ಅಹಮ್ಮದ್ ಭಾಷಣ ಆರಂಭಿಸಿದರು. ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯಲು ಭಾಷಾತಂತ್ರ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ಆಯಾ ಸಮುದಾಯದ ಮುಖಂಡರ ಮೂಲಕ ಆಯಾ ಭಾಷೆಯಲ್ಲಿ ಭಾಷಣಕ್ಕೆ ಆಧ್ಯತೆ ನೀಡುತ್ತಿದೆ. ಇತ್ತೀಚೆಗೆ ಶಿರಹಟ್ಟಿಯಲ್ಲಿ ಜರುಗಿದ ಪ್ರಜಾಧ್ವನಿ ಕಾರ್ಯಕ್ರಮದಲ್ಲೂ ಇದೇ ರೀತಿಯಲ್ಲಿ ಸಮುದಾಯದ ಭಾಷೆಗಳ ಭಾಷಣ ಮಾಡುವ ಮೂಲಕ ಮತದಾರರನ್ನು ಸೆಳೆಯುತ್ತಿದೆ.

    ಬಾಕ್ಸ್:
    ಉರ್ದು ಭಾಷೆಯಲ್ಲಿ ಜಮೀರ್ ಅಹಮ್ಮದ್ ನಿರಂತರ ಭಾಷಣ ಮುಂದುವರಿಸುತ್ತಿದ್ದಂತೆ ಕಾರ್ಯಕರ್ತರು ಹಾಗೂ ಕೆಲ ಮುಖಂಡರಲ್ಲಿ ಅಸಮಧಾನ ಮೂಡಿ ಬಂತು. ಇದನ್ನು ಗಮನಿಸಿದ ಸಂಘಟಕರು ಕನ್ನಡದಲ್ಲಿ ಭಾಷಣ ಮಾಡುವಂತೆ ಸೂಚಿಸಿದರು. ಇದನ್ನು ಗಮನಿಸಿದ ಜಿ.ಎಸ್. ಪಾಟೀಲ, ಸಿದ್ದರಾಮಯ್ಯ ಅವರು ಸಂಘಟಕರನ್ನು ಕರೆದು ಉರ್ದು ಭಾಷಣಕ್ಕೆ ತಡೆ ನೀಡಿದ್ದನ್ನು ಪ್ರಶ್ನಿಸಿದರು.

    ಕೋಟ್:
    ಮಹಾದಾಯಿ ಪ್ರಾಧಿಕಾರ ರಚನೆ ಮಾಡಿದ್ದು ಮಹಾ ಪ್ರಮಾದ. ವನ್ಯ ಜೀವಿ ಕುರಿತು ಆಕ್ಷೇಪಣೆ ಇರುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ. ಮತ್ತೊಂದು ಹೊಸ ಸಮಸ್ಯೆಯನ್ನು ಸರ್ಕಾರವೇ ಸೃಷ್ಟಿಸಿದೆ. ಜನ ಮರಳೋ ಜಾತ್ರ ಮರಳೋ ಎಂಬಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ.

    ಎಚ್.ಕೆ. ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts