More

  ಲೋಕಸಭೆ ಚುನಾವಣೆ; ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

  ನವದೆಹಲಿ: ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತದಾರರನ್ನು ಓಲೈಸಲು ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿದ್ದು, ಈ ಬಾರಿ ಶತಾಯಗತಾಯ ಕೇಂದ್ರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿದೆ. ಅದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ತನ್ನ ಸ್ಟಾರ್​ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  ಲೋಕಸಭೆ ಚುನಾವಣೆ ನಿಮಿತ್ತ ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ​ ಸೇರಿದಂತೆ 40 ಘಟಾನುಘಟಿ ನಾಯಕರನ್ನು ಹೆಸರಿಸಲಾಗಿದೆ.

  ಯಾರ್‍ಯಾರಿಗೆ ಸ್ಥಾನ ?

  ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ್, ಜೈರಾಮ್ ರಮೇಶ್, ಎಂ.ವೀರಪ್ಪ ಮೊಯ್ಲಿ, ಲಕ್ಷ್ಮಣ ಸವದಿ, ಬಿ.ವಿ.ಶ್ರೀನಿವಾಸ್, ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಚ್.ಎಂ.ರೇವಣ್ಣ, ಬಿ.ಸೋಮಶೇಖರ್, ಜಿ.ಸಿ.ಚಂದ್ರಶೇಖರ್, ಉಮಾಶ್ರೀ, ಸೈಯದ್ ನಾಸಿರ್ ಹುಸೇನ್, ಜಮೀರ್ ಅಹ್ಮದ್, ಮಧು ಬಂಗಾರಪ್ಪ, ವಿ.ಎಸ್.ಉಗ್ರಪ್ಪ, ಎಲ್.ಹನುಮಂತಯ್ಯ, ಪಿಜಿಆರ್ ಸಿಂಧ್ಯಾ, ಅಭಿಷೇಕ್ ದತ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ ನಾಯ್ಕ್, ಡಾ.ಪುಷ್ಪಾ ಅಮರನಾಥ್, ತನ್ವೀರ್ ಸೇಠ್, ಮಯೂರ್ ಜಯಕುಮಾರ್​ಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.

  See also  ಶಿಕ್ಷಕರ ಮೇಲಿದೆ ಸತ್ಪ್ರಜೆಗಳ ನಿರ್ಮಾಣದ ಹೊಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts