ಶ್ರೀಶೈಲ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕ ಹೃದಯಾಘಾತಕ್ಕೆ ಬಲಿ

Heart Attack
Published on

ರಾಯಚೂರು: ಯುಗಾದಿ ಹಬ್ಬದ ಪ್ರಯುಕ್ತ  ಬಿರು ಬಿಸಿಲಿನಲ್ಲಿ‌ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಬಳಿ ಘಟನೆ ನಡೆದಿದೆ.

ಮೃತ ಯುವಕನನ್ನು ಶ್ರೀಶೈಲ ದಡುತಿ (22) ಎಂದು ಗುರುತಿಸಲಾಗಿದ್ದು, ಈ ತ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಮೂಲದವನು ಎಂದು ತಿಳಿದು ಬಂದಿದೆ. ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ತಮ್ಮ ಸಂಗಡಿಗರ ಜೊತೆಗೂಡಿ ಶ್ರೀಶೈಲ ಪಾದಯಾತ್ರೆ ಹೊರಟಿದ್ದರು. 

ಪಾದಯಾತ್ರೆ ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮಕ್ಕೆ ತಲುಪಿತ್ತು. ಸುಸ್ತಾಗಿರೋ ಹಿನ್ನೆಲೆ ದಾರಿ ಮಧ್ಯೆ ವಿಶ್ರಾಂತಿಗೆಂದು ಶ್ರೀಶೈಲ ಕುಳಿತಿದ್ದರು. ಬಿಸಿಲಿನ ತಾಪಕ್ಕೆ ದಣಿದಿದ್ದು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತವಾಗಿದ್ದು, ಆತ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net