More

    ಸಮಾವೇಶವಾಗಿ ಮಾರ್ಪಟ್ಟ ಕಾಂಗ್ರೆಸ್ ಪಾದಯಾತ್ರೆ; ಈ ಹೋರಾಟದಿಂದ ಇತಿಹಾಸ ಸೃಷ್ಟಿ ಎಂದ ಸುರ್ಜೆವಾಲಾ

    ಬೆಂಗಳೂರು: ನಗರಕ್ಕೆ 50 ವರ್ಷ ಕುಡಿಯುವ ನೀರು ದೊರಕಿಸಿಕೊಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಈ ಪಾದಯಾತ್ರೆ ಇತಿಹಾಸವನ್ನೇ ಸೃಷ್ಟಿಸಿದ್ದು, ಇದು ಹೋರಾಟದ ಅಂತ್ಯವಲ್ಲ, ಆರಂಭ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

    ಮೇಕೆದಾಟು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ ಐದು ದಿನಗಳ ಹಿಂದೆ ಪುನರಾರಂಭ ಆಗಿರುವ ಕಾಂಗ್ರೆಸ್ ಪಾದಯಾತ್ರೆ ಎರಡು ದಿನಗಳ ಹಿಂದೆಯೇ ಬೆಂಗಳೂರು ಪ್ರವೇಶಿಸಿದ್ದು, ಇಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು. ಹಿರಿಯ ನಾಯಕರು ಸಮಾವೇಶ ಉದ್ದೇಶಿಸಿ ಮಾತನಾಡಿದರು.

    ಇದು ಬೇರೆ ರಾಜ್ಯದ ವಿರುದ್ಧ ಹೋರಾಟ ಅಲ್ಲ; ಪಾದಯಾತ್ರೆ ಮಾಡಿದ್ದು ರಾಜಕೀಯಕ್ಕೆ ಅಲ್ಲ. ಕುಡಿಯುವ ನೀರಿಗಾಗಿ ಸಂಕಲ್ಪ ಮಾಡಿದ್ದು, ಅದಕ್ಕಾಗಿ ನಡೆದ ಹೋರಾಟ. ನಿಮ್ಮ ನೀರನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ, ಕಾಂಗ್ರೆಸ್ ಸರ್ಕಾರ ಡಿಪಿಆರ್ ಮಾಡಿತ್ತು. ಕೇಂದ್ರ ಬಿಜೆಪಿ ಸರ್ಕಾರ ಏಳು ವರ್ಷದಿಂದ ಇದೆ, ಆದ್ರೆ ಇಲ್ಲಿಯವರೆಗೆ ಪರ್ಮಿಷನ್ ನೀಡಿಲ್ಲ. ಬಿಜೆಪಿ ಕೇವಲ ರಾಜಕೀಯ ‌ಮಾಡುತ್ತಿದೆ ಎಂದು ಆರೋಪಿಸಿದರು.

    ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ.ಪರಮೇಶ್ವರ್, ಡಿಕೆ ಸುರೇಶ್, ಎಚ್ಕೆ ಪಾಟೀಲ್, ರಾಮಲಿಂಗಾರೆಡ್ಡಿ, ವೀರಪ್ಪ ಮೊಯಿಲಿ, ಆರ್ ವಿ ದೇಶಪಾಂಡೆ, ಬಿ ಕೆ ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಬಿ ವಿ ಶ್ರೀನಿವಾಸ್, ರೆಹಮಾನ್ ಖಾನ್, ಕೆ ಎಚ್ ಮುನಿಯಪ್ಪ, ನಂಜಾವಧೂತ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು.

    ನಾಳೆಯ ಬಜೆಟ್’ಅನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆಯೋದಿಲ್ಲ: ಮುನಿರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts