More

    ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್​ ಗಾಂಧಿ ನಿರ್ಧಾರವೊಂದೇ ಬಾಕಿ

    ನವದೆಹಲಿ: ಇಂದು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜ್ಯಸಭಾ ಸದಸ್ಯರೊಂದಿಗೆ ವರ್ಚ್ಯುವಲ್​ ಮೀಟಿಂಗ್​ ನಡೆಸಿದ್ದಾರೆ.

    ಆದರೆ ಈ ಸಭೆಯಲ್ಲೂ ಮತ್ತೆ ರಾಹುಲ್​ ಗಾಂಧಿಯವರೇ ಕಾಂಗ್ರೆಸ್​ ಅಧ್ಯಕ್ಷರಾಗಬೇಕು ಎಂಬ ಬೇಡಿಕೆಯನ್ನು ಬಹುತೇಕ ನಾಯಕರು ಮುಂದಿಟ್ಟಿದ್ದಾರೆ.ಕಾಂಗ್ರೆಸ್​ ಹಿರಿಯ ನಾಯಕ, ರಾಜ್ಯಸಭಾ ಎಂಪಿ ದಿಗ್ವಿಜಯ ಸಿಂಗ್​ ಅವರು ಸಭೆಯಲ್ಲಿ ಮೊದಲು ರಾಹುಲ್​ ಗಾಂಧಿ ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್​-19 ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಇದರಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್​ ಅವರು, ಕೇಂದ್ರ ಸರ್ಕಾರದ ವಿಫಲತೆಗಳನ್ನು ರಾಹುಲ್​ ಗಾಂಧಿಯವರು ಎತ್ತಿ ತೋರಿಸುತ್ತಿದ್ದಾರೆ. ಅವರೇ ಮತ್ತೊಮ್ಮೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುರೇಶ್​ ರೈನಾ ಭಾರತ ಪರ ಪದಾರ್ಪಣೆ ಮಾಡಿ 15 ವರ್ಷ, ಪತ್ನಿಯಿಂದ ವಿಶೇಷ ಸಂದೇಶ

    ದಿಗ್ವಿಜಯ್​ ಸಿಂಗ್​ ಅವರ ಮಾತಿಗೆ, ರಾಜ್ಯಸಭಾ ಎಂಪಿಗಳಾದ ಶಕ್ತಿಸಿನ್ಹ್​ ಗೋಹಿಲ್​, ನೀರಜ್​ ಡಾಂಗಿ ಮತ್ತಿತರರೂ ಧ್ವನಿಗೂಡಿಸಿದ್ದಾರೆ.

    ಈ ಹಿಂದೆ ಜು.11ರಂದು ಲೋಕಸಭಾ ಸಂಸದರ ಜತೆಗೂ ಸೋನಿಯಾ ಗಾಂಧಿ ಸಭೆ ನಡೆಸಿದ್ದರು. ಆಗ ಲೋಕಸಭಾ ಸದಸ್ಯರೂ ಕೂಡ ಇದೇ ಹೇಳಿದ್ದರು.

    ಸೋನಿಯಾಗಾಂಧಿಯವರ ಮಧ್ಯಂತರ ಅಧ್ಯಕ್ಷ ಸ್ಥಾನದ ಅವಧಿ ಆಗಸ್ಟ್​ 10ರಂದು ಮುಕ್ತಾಯಗೊಳ್ಳಲಿದೆ. ಅದರ ನಂತರ ಮುಂದೇನು ಎಂಬ ಪ್ರಶ್ನೆ ಶುರುವಾಗಿದ್ದು, ರಾಹುಲ್​ ಗಾಂಧಿಯವರೇ ಮತ್ತೆ ಅಧ್ಯಕ್ಷರಾಗುವರಾ ಎಂಬ ಕುತೂಹಲವೂ ಶುರುವಾಗಿದೆ.
    ಆದರೆ ರಾಹುಲ್​ ಗಾಂಧಿ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. (ಏಜೆನ್ಸೀಸ್​)

    ಸರ್ಕಾರಿ ಬಂಗಲೆಗೆ ಪ್ರಿಯಾಂಕಾ ಗಾಂಧಿ ಗುಡ್‌ಬೈ- ವಿವಾದಕ್ಕೆ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts