More

    ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್; ಬಿಜೆಪಿ ಸೇರಿದ ಹಾಲಿ ಶಾಸಕ

    ಜೈಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್​ ಪಕ್ಷದ ಹಾಲಿ ಶಾಸಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಒಂದನ್ನು ನೀಡಿದ್ದಾರೆ.

    ಧೋಲ್‌ಪುರದ ಬಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರ್‌ರಾಜ್ ಮಾಲಿಂಗ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್​ನಲ್ಲಿ ಕೊಡಲಾಗುತ್ತಿದ್ದ ಕಿರುಕುಳ ತಾಳಲಾರದೆ ಬಿಜೆಪಿ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಗಿರಿರಾಜ್​ ಜತೆಗೆ ಆಮ್​ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷ ಅನುರಾಗ್ ಸಿಂಗ್​ ಬ್ರಾರ್​ ಬಿಜೆಪಿ ಸೇರಿದ್ದಾರೆ.

    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಗಿರಿರಾಜ್​, ಕಳೆದ ವರ್ಷ ಇಂಜಿನಿಯರ್​ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ ಪೊಲೀಸರಿಗೆ ಶರಣಾಗುವಂತೆ ಮಾಡಿದ್ದರು. ಮುಖ್ಯಮಂತ್ರಿಗಳು ನನ್ನ ಮಾತನ್ನು ಕೇಳದೆ ಯಾರೋ ಕೆಲವರ ಮಾತನ್ನು ಕಟ್ಟಿಕೊಂಡು ರಾಜಕೀಯ ಮಾಡಿದರು. ಕಾಂಗ್ರೆಸ್​ನಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಮನನೊಂದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದು ಗಿರಿರಾಜ್​ ಮಾಲಿಂಗ ಹೇಳಿದ್ದಾರೆ.

    ಇದನ್ನೂ ಓದಿ: ಕ್ರಿಕಟ್ ದಿಗ್ಗಜನ ದಾಖಲೆ ಮುರಿದ ಬೆನ್ನಲ್ಲೇ ಕೊಹ್ಲಿಯನ್ನು ಸ್ವಾರ್ಥಿ ಎಂದ ನೆಟ್ಟಿಗರು

    ಗಿರಿರಾಜ್​ ಜತೆಗೆ ರಾಜ್ಯ ಕಾಂಗ್ರೆಸ್​ ಘಟಕದ ಪ್ರಮುಖ ನಾಯಕರಾದ ಮುಸ್ತಾಕ್ ಅಹ್ಮದ್ ಖಾನ್, ರವಿ ಪಚೌರಿ, ದೀಪ್ ಸಿಂಗ್ ಕುಶ್ವಾಹ, ಮಂಗಿಲಾಲ್ ಶರ್ಮಾ ಮತ್ತು ರಾಮವರನ್ ಶರ್ಮಾ ಕೂಡ ಬಿಜೆಪಿ ಸೇರಿದ್ದಾರೆ. ಧೋಲ್‌ಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿರುವ ಗಿರಿರಾಜ್​ ಬಿಜೆಪಿ ಸೇರ್ಪಡೆ ಕಾಂಗ್ರೆಸ್​ಗೆ ದೊಡ್ಡ ಹೊಡೆತ ಎಂದೇ ಹೇಳಲಾಗಿದೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts