More

    ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂ. ದೇಣಿಗೆ ನೀಡಿ ಕಾಂಗ್ರೆಸ್​ ಶಾಸಕಿ ಕೊಟ್ಟ ಕರೆ ಹೀಗಿದೆ…

    ರಾಯ್​ ಬರೇಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ದೇಣಿಗೆ ಸಂಗ್ರಹ ಕಾರ್ಯಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ 600ಕ್ಕೂ ಹೆಚ್ಚು ಕೋಟಿ ರೂ. ಸಂಗ್ರಹವಾಗಿದ್ದು, ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಅನೇಕ ಗಣ್ಯಾತಿಗಣ್ಯರು ದೇಣಿಗೆ ನೀಡುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ರಾಯ್​ ಬರೇಲಿ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಅದಿತಿ ಸಿಂಗ್ ಅವರು ಭವ್ಯ ರಾಮಮಂದಿರ ನಿರ್ಮಾಣಕ್ಕೆ​ ಬರೋಬ್ಬರಿ 51 ಲಕ್ಷ ರೂ. ದೇಣಿಗೆಯನ್ನು ವಿಶ್ವ ಹಿಂದು ಪರಿಷದ್ (ವಿಎಚ್​ಪಿ)​ಗೆ ನೀಡಿದ್ದಾರೆ.

    ಇದನ್ನೂ ಓದಿರಿ: ಸಾವಿಗೂ ಮುನ್ನ ಕೈ ಬೆಸೆದ ವೃದ್ಧ ದಂಪತಿ: ಮನಕಲಕುವ ಫೋಟೋ ನೋಡಿ ನೆಟ್ಟಿಗರಿಂದ ಕರೊನಾಗೆ ಹಿಡಿ ಶಾಪ!​

    ಈ ಬಗ್ಗೆ ಮಾತನಾಡಿರುವ ಅದಿತಿ, ನನ್ನ ತಂಡ ಮತ್ತು ಬೆಂಬಲಿಗರ ಪರವಾಗಿ ಮಂದಿರ ನಿರ್ಮಾಣಕ್ಕಾಗಿ ನಾನು ನನ್ನ ಕೈಲಾದಷ್ಟು ನೆರವನ್ನು ವಿಎಚ್​ಪಿಗೆ ಹಸ್ತಾಂತರಿಸಿದ್ದೇನೆ. ಎಲ್ಲರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಹೇಳಿದ್ದಾರೆ.

    ಕೇವಲ 20 ದಿನಗಳಲ್ಲಿ 600 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಇದು ಮಂದಿರ ನಿರ್ಮಾಣಕ್ಕೆ ಅಂದಾಜಿಸಿರುವ 1,100 ಕೋಟಿ ರೂಪಾಯಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವಾಗಿದೆ. ಜ.15ರಂದು ಆರಂಭವಾಗಿರುವ ‘ನಿಧಿ ಸಮರ್ಪಣ ಅಭಿಯಾನ’ ಫೆ. 27ಕ್ಕೆ ಕೊನೆಗೊಳ್ಳಲಿದ್ದು, ಆ ದಿನದೊಳಗೆ ದೇಣಿಗೆ ಸಂಗ್ರಹ ಮತ್ತಷ್ಟು ವೇಗವಾಗಿ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಆದರೆ, ದೇಣಿಗೆ ಸಂಗ್ರಹಕ್ಕೆ ಯಾವುದೇ ಗುರಿಯನ್ನು ಇರಿಸಿಕೊಂಡಿಲ್ಲ ಎಂದು ಟ್ರಸ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ಮಂದಿರಕ್ಕೆ ಮಹಾದೇಣಿಗೆ: ಇಪ್ಪತ್ತೇ ದಿನದಲ್ಲಿ ಹರಿದು ಬಂತು 600 ಕೋಟಿ ರೂಪಾಯಿ!

    ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ

    ಪೊಲೀಸ್ ಪರೀಕ್ಷೆ ನಕಲಿಗೆ ಬೇಲಿ; ಇಲಾಖೆಯಿಂದ ಬಯೋಮೆಟ್ರಿಕ್ ಅಸ್ತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts