More

    ನನ್ನ ಕ್ಷೇತ್ರದಲ್ಲಿ ಭಾರಿ ಕಿರುಕುಳ ಕೊಡ್ತಿದ್ದಾರೆ, ನನ್ನನ್ನು ನೀವೆ ರಕ್ಷಿಸಿ: ಶಾಸಕನ ಅಳಲು

    ಬೆಂಗಳೂರು: ಭದ್ರಾವತಿ ಕ್ಷೇತ್ರದಲ್ಲಿ ಭಾರಿ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಕುಟುಂಬದ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರ್ಕಾರ ನನ್ನ ವಿರುದ್ಧ ಸೇಡಿನ ರಾಜಕಾರಣ ಮಾಡ್ತಿದೆ. ನೀವು ನನ್ನ ರಕ್ಷಣೆಗೆ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಗಮೇಶ್ ಅಳಲುತೋಡಿಕೊಂಡಿದ್ದಾರೆ.

    ವಿಧಾನಸಭೆಯಲ್ಲಿ ಗುರುವಾರ ಬೆಳಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧ್ರುವ ನಾರಾಯಣ, ಸಲೀಂ ಅಹಮದ್ ಮತ್ತಿತರರು ಭಾಗವಹಿಸಿದ್ದರು. ಅವರ ಸಮ್ಮುಖದಲ್ಲೇ ಶಾಸಕ ಸಂಗಮೇಶ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

    ಭದ್ರಾವತಿಯಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯ ಇಟ್ಟಿದ್ದೆವು. ಬಹುಮಾನ ಕೊಡುವ ವೇಳೆ ಧರ್ಮ, ಜಾತಿ ಮುಂದಿಟ್ಟು ಕೋಮುಗಲಭೆ ಸೃಷ್ಠಿಗೆ ಆರ್​ಎಸ್ಎಸ್ ನವರು ಮುಂದಾಗಿದ್ದರು. ಅವರನ್ನ ಅಂದು ಸಮಾಧಾನ ಮಾಡಿದ್ದೆವು. ಆದರೆ ಅಧಿಕಾರ ದುರ್ಬಳಕೆ ಮಾಡ್ತಿದ್ದಾರೆ. ಅಟ್ಮೆಂಟ್ ಮರ್ಡರ್ ಕೇಸ್ ನನ್ನ ವಿರುದ್ಧ ದಾಖಲಿಸಿದ್ದಾರೆ. ಸಿಎಂ ಕುಟುಂಬಸ್ಥರು ಮತ್ತು ಈಶ್ವರಪ್ಪ ಕೇಸ್ ಹಾಕಿಸಿದ್ದಾರೆ. ಭದ್ರಾವತಿಯಲ್ಲಿ ಬಿಜೆಪಿಗೆ ಏನೇನೂ ಬೇರಿಲ್ಲ. ಅದಕ್ಕೆ ಕೋಮುಗಲಭೆ ಸೃಷ್ಟಿಸಲು ಹೊರಟಿದ್ದಾರೆ ಎಂದು ಸಂಗಮೇಶ್​ ಆರೋಪಿಸಿದರು.

    ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಿಎಂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ತಾಕತ್ತಿದ್ದರೆ ಈಶ್ವರಪ್ಪ ನನ್ನನ್ನು ಜೈಲಿಗೆ ಕಳಿಸಲಿ. ನಾವು ಅವರಂತೆ ಸಿಡಿ ಮಾಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಶಿವಮೊಗ್ಗದಲ್ಲಿ‌ ಗಣಿ ಸ್ಫೋಟವಾಯ್ತು. ಅದರಲ್ಲಿ ಮೂವರು ಇನ್ನೂ ಸಿಕ್ಕಿಲ್ಲ ಎಂದು ಕಿಡಿಕಾರಿದರು.

    ಶಾಸಕಾಂಗ ಪಕ್ಷದ ಸಭೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ತನ್ವೀರ್​ ಸೇಠ್​ ಗೈರಾಗಿದ್ದರು. ಡಿಕೆಶಿ ವಿರುದ್ಧ ಅಖಂಡ ಶ್ರೀನಿವಾಸ್​ಗೆ ಅಸಮಾಧಾನ ಇದ್ದರೆ, ಸಿದ್ದರಾಮಯ್ಯ ವಿರುದ್ಧ ತನ್ವೀರ್​ಗೆ ಸಿಟ್ಟಿದೆ. ಈ ಕಾರಣಕ್ಕೆ ಇವರಿಬ್ಬರೂ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಮುಜುಗರಕ್ಕೆ ಒಳಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಭೆಗೆ ಬಂದಿಲ್ಲ.

    ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

    ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts