More

    ಕಾಂಗ್ರೆಸ್ ಪ್ರಣಾಳಿಕೆ ಮೇಲಿದೆ ಮುಸ್ಲಿಂ ಲೀಗ್‌ ಮುದ್ರೆ, ಎಡಪಂಥೀಯರ ಪ್ರಾಬಲ್ಯ: ಪ್ರಧಾನಿ ಮೋದಿ

    ನವದೆಹಲಿ: ಕಾಂಗ್ರೆಸ್ ಪ್ರಣಾಳಿಕೆ ಮೇಲೆ ಮುಸ್ಲಿಂ ಲೀಗ್‌ ನ ಮುದ್ರೆ ಹಾಗೂ ಎಡಪಂಥೀಯರ ಪ್ರಾಬಲ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಮಕ್ಕಳನ್ನು ಹೆರುವುದಕ್ಕಿಂತ ನಾಯಿಮರಿ ಸಾಕುವುದು ಉತ್ತಮ..ಹೀಗೆಂದ ಕನ್ನಡ ನಟಿ ಯಾರು ಗೊತ್ತೇ?

    ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಶನಿವಾರ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಗ್ರ್ಯಾಂಡ್ ಓಲ್ಡ್ ಪಕ್ಷದ ಚುನಾವಣಾ ಪ್ರಣಾಳಿಕೆಯು ಸಂಪೂರ್ಣವಾಗಿ ಮುಸ್ಲಿಂ ಲೀಗ್‌ನ ಮುದ್ರೆಯನ್ನು ಹೊಂದಿದೆ ಮತ್ತು ಅದರ ಉಳಿದ ಭಾಗವು ಎಡಪಂಥೀಯರ ಪ್ರಾಬಲ್ಯ ಪಡೆದುಕೊಂಡಿದೆ ಎಂದು ಪ್ರತಿಪಾದಿಸಿದರು.

    ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ದಶಕಗಳ ಹಿಂದೆಯೇ ಕೊನೆಗೊಂಡಿದೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಪ್ರಚಲಿತದಲ್ಲಿದ್ದ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

    ಲೋಕಸಭೆ ಚುನಾವಣೆಯಲ್ಲಿ ಮತದಾರರ ವಿಶ್ವಾಸ ಪಡೆಯಲು ಹೆಣಗಾಡುತ್ತಿರುವ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದವರನ್ನು ಓಲೈಸಲು ಹುಸಿ ಭರವಸೆಗಳನ್ನು ಘೋಷಿಸಿದೆ. ಶಿಕ್ಷಣ, ಮಹಿಳೆಯರಿಗೆ ನಗದು ಘೋಷಣೆ ಮಾಡಿದೆ.ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ( ಎಂಎಸ್‌ಪಿ ) ಕಾನೂನು ಖಾತರಿ, ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ 25 ಲಕ್ಷದವರೆಗಿನ ನಗದು ರಹಿತ ವಿಮೆ ಮತ್ತು 1ನೇ ತರಗತಿಯಿಂದ 12ನೇ ತರಗತಿವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡುವ ಭರವಸೆ ನೀಡಿದೆ. ಇವೆಲ್ಲ ಹುಸಿಭರವಸೆಗಳಾಗಿದ್ದು. ರಾಷ್ಟ್ರದ ಹಿತಾಸಕ್ತಿ, ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿಲ್ಲ ಎಂದು ಹೇಳಿದರು.

    ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಒಂದೇ ಚಕ್ರದ ಸೈಕಲ್​ಏರಿ ಹೊರಟ ಕೇರಳ ಯುವಕ! ಕಾರಣ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts