More

  ‘5 ವರ್ಷಕ್ಕೊಮ್ಮೆ ಏಕೆ ಸೋಲುತ್ತೇವೆಂದು ತಿಳಿಯುತ್ತಿಲ್ಲ…’ : ಸಚಿನ್ ಪೈಲಟ್

  ರಾಜಸ್ಥಾನ: ರಾಜಸ್ಥಾನದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಆ ಪದ್ಧತಿಯನ್ನು ಉಳಿಸಿಕೊಂಡು ಅಧಿಕಾರ ಬದಲಾವಣೆ ಮಾಡಲಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೋಲು ಕಂಡಿದ್ದು, ಬಿಜೆಪಿ ಸರ್ಕಾರ ರಚನೆ ಮಾಡಿದೆ. ಏತನ್ಮಧ್ಯೆ, ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಬಾರಿಯೂ ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಆದರೆ ಪ್ರತಿ ಐದು ವರ್ಷಗಳ ನಂತರ ನಾವು ಏಕೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂದು ತಿಳಿದಿಲ್ಲ ಎಂದು ಪೈಲಟ್ ಹೇಳಿದರು.

  ತಮ್ಮ ವಿಧಾನಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಟೋಂಕ್‌ಗೆ ಆಗಮಿಸಿದ ಸಚಿನ್ ಪೈಲಟ್ ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿ, ಚುನಾವಣೆಗೂ ಮುನ್ನ ಬಿಜೆಪಿಯ ಹಲವು ದೊಡ್ಡ ನಾಯಕರು ದೆಹಲಿಯಿಂದ ರಾಜಸ್ಥಾನಕ್ಕೆ ಬಂದಿದ್ದರು. ಆ ನಾಯಕರು ರಾಜ್ಯದ ಜನತೆಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ್ದರು. ನಾವು ಅವರ ಭರವಸೆಗಳನ್ನು ಈಡೇರಿಸುವಂತೆ ಕೇಳಿದ್ದೆವು. ಹೊಸ ಸರ್ಕಾರವು ಇನ್ನೂ ತನ್ನ ಸಚಿವ ಸಂಪುಟವನ್ನು ರಚಿಸಲು ಸಮರ್ಥವಾಗಿಲ್ಲ, ನಾವು ಸಹ ಈ ಸಮಯದಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ಅವರು ಹೇಳಿದರು.

  ಈ ಬಾರಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೂ ದುರ್ಬಲರಾಗುವುದಿಲ್ಲ ಎಂದ ಮಾಜಿ ಉಪ ಸಿಎಂ, ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಲು ಬಂದಾಗ ತಮ್ಮ ನೋವನ್ನು ಮರೆಮಾಚಲಾಗಲಿಲ್ಲ. ಪಕ್ಷದ ಸೋಲು ಮತ್ತು ಅವರ ನೋವು ಅಂತಿಮವಾಗಿ ಹೊರಬಂದಿತು.

  ಪ್ರತಿ ಬಾರಿಯೂ ನಾವು ತುಂಬಾ ಕಷ್ಟಪಡುತ್ತೇವೆ, ಆದರೆ ಪ್ರತಿ ಐದು ವರ್ಷಗಳಿಗೊಮ್ಮೆ ನಾವು ಚುನಾವಣೆಯಲ್ಲಿ ಏಕೆ ಸೋಲುತ್ತೇವೆ ಎಂದು ನನಗೆ ತಿಳಿದಿಲ್ಲ, ಈ ಬಾರಿ ನಮಗೆ ಗೆಲುವಿನ ಸಂಪೂರ್ಣ ಭರವಸೆ ಇತ್ತು, ಆದರೆ ನಾವು ಸೋತಿದ್ದೇವೆ ಎಂದರು.

  See also  ಡಿಕೆಶಿ ಹಾಗೂ ಜಮೀರ್ ಅಹ್ಮದ್ ವಿರುದ್ಧ ಶೋಭಾ ಕರಂದ್ಲಾಜೆ ದೂರು

  ಡಿಸೆಂಬರ್ 3 ರಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ 199 ಸ್ಥಾನಗಳಲ್ಲಿ ಬಿಜೆಪಿ 115 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 69 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಇದಲ್ಲದೇ ಬಿಎಸ್‌ಪಿ ಎರಡು ಸ್ಥಾನ ಪಡೆದಿದೆ. ಬಿಜೆಪಿ ಗೆಲುವಿನ ನಂತರ ಭಜನ್‌ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿ, ದಿಯಾ ಕುಮಾರಿ ಮತ್ತು ಪ್ರೇಮಚಂದ್ ಬೈರ್ವಾ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ, ಭಜನ್ ಲಾಲ್ ಅವರ ಸಂಪುಟಕ್ಕೆ ಯಾವ ಶಾಸಕರು ನೇರ್ಪಡೆಯಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

  ಮತ್ತೆ Twitter/X ಡೌನ್…. ಬೆಳಗ್ಗೆಯಿಂದಲೇ ಸಮಸ್ಯೆಗಳನ್ನು ಎದುರಿಸಿದ ಏಳು ಸಾವಿರಕ್ಕೂ ಹೆಚ್ಚು ಬಳಕೆದಾರರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts