More

    ಪುಲ್ವಾಮ ದಾಳಿಗೆ ಒಂದು ವರ್ಷ: ಹುತಾತ್ಮರನ್ನು ಸ್ಮರಿಸುತ್ತಾ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆ ಕೇಳಿದ ರಾಹುಲ್​ ಗಾಂಧಿ

    ನವದೆಹಲಿ: ಕಳೆದ ವರ್ಷ ಪುಲ್ವಾಮ ದಾಳಿಯಲ್ಲಿ ಹತರಾದ ಯೋಧರನ್ನು ಸ್ಮರಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಯನ್ನು ಕೇಳಿದ್ದಾರೆ.

    ಪುಲ್ವಾಮ ದಾಳಿಯ ವಷಾರ್ಚರಣೆಯ ಅಂಗವಾಗಿ ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, “ಇಂದು ನಾವು ಪುಲ್ವಾಮ ದಾಳಿಯಲ್ಲಿ ಹತರಾದ ನಮ್ಮ 40 ಸಿಆರ್​ಪಿಎಫ್​ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಮೊದಲು ನಾವು ಈ ಪ್ರಶ್ನೆಗಳನ್ನು ಕೇಳೋಣ.
    1) ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?
    2) ದಾಳಿಯ ವಿಚಾರಣೆಯ ಫಲಿತಾಂಶ ಏನು?
    3) ದಾಳಿಗೆ ಅವಕಾಶ ನೀಡಿದ ಈ ಭದ್ರತಾ ಕೊರತೆಗೆ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

    ರಾಹುಲ್​ ಗಾಂಧೀಯವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, “ರಾಹುಲ್​ ಗಾಂಧಿಯವರು ಜೈಶ್​-ಎ-ಮೊಹಮ್ಮದ್​ ಮತ್ತು ಎಲ್​ಇಟಿ ಉಗ್ರರ ಮೇಲೆ ಸಹಾನುಭೂತಿ ಹೊಂದಿರುವವರು. ಇದು ಉಗ್ರರಿಗೆ ಭಾರತ ಸರ್ಕಾರ ಮಾತ್ರವಲ್ಲದೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.” ಎಂದು ತಿಳಿಸಿದೆ.

    2019ರ ಫೆ.14ರಂದು ಜೈಷ್​-ಎ-ಮೊಹಮ್ಮದ್​ನ ಉಗ್ರನೊಬ್ಬ 80 ಕೆ.ಜಿ. ಆರ್​ಡಿಎಕ್ಸ್​ ಸ್ಫೋಟಕ ತುಂಬಿದ್ದ ಕಾರಿನಲ್ಲಿ ಬಂದು ಯೋಧರನ್ನು ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಸ್ಫೋಟಕ ಸ್ಫೋಟಿಸಿದ್ದರಿಂದಾಗಿ 40 ಯೋಧರು ಸ್ಥಳದಲ್ಲೇ ಮೃತ ಪಟ್ಟಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts