More

    ಗ್ರಾಹಕರಿಂದ ಜೆಸ್ಕಾಂಗೆ ಪವರ್ ಶಾಕ್..!

    ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯುತ್ತಿದ್ದಂತೆ ಗ್ರಾಹಕರು ಜೆಸ್ಕಾಂ ಸೇರಿದಂತೆ ವಿವಿಧ ಪವರ್ ಕಂಪನಿಗಳಿಗೆ ಶಾಕ್ ನೀಡುತ್ತಿದ್ದಾರೆ.


    ಹೌದು, ಕಾಂಗ್ರೆಸ್ ಘೋಷಣೆ ಮಾಡಿದ ಚುನಾವಣೆ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದ್ದು, ಅದರಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ಒಂದಾಗಿದೆ. ಕಾಂಗ್ರೆಸ್ ಅಧಿಕಾರ ನಡೆಸಲು ಸಿದ್ಧತೆ ನಡೆದಿದ್ದು, ಹಳ್ಳಿಗಳಲ್ಲಿ ವಿದ್ಯುತ್ ಶುಲ್ಕ ಪಡೆಯಲು ಹೋಗುವ ಜೆಸ್ಕಾಂ ಸಿಬ್ಬಂದಿಗೆ ನಾವೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎನ್ನುತ್ತಿದ್ದಾರೆ.

    ಇನ್ನು ಹೆಚ್ಚಿಗೆ ಮಾತನಾಡಿದರೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಯಾರೂ ಕೂಡ ಕರೆಂಟ್ ಬಿಲ್ ಕಟ್ಟುವಂತಿಲ್ಲ ಅಂತ ಹೇಳಿದ್ದಾರೆ. ಅವರ ಹತ್ತಿರವೇ ಕಟ್ಟಿಸಿಕೊಳ್ಳಿ ಎನ್ನುವ ಮಾತುಗಳು ಗ್ರಾಮೀಣ ಭಾಗದಲ್ಲಿ ಕೇಳಿ ಬರುತ್ತಿದ್ದು, ಇದರಿಂದಾಗಿ ಜೆಸ್ಕಾಂ ಸಿಬ್ಬಂದಿ ಏನೂ ಮಾತನಾಡದೆ ಬರಿಗೈಯಲ್ಲಿ ವಾಪಸ್ ಹೋಗುತ್ತಿದ್ದಾರೆ.

    ಪ್ರತಿ ತಿಂಗಳು 2 ಕೋಟಿ ರೂ. ನಷ್ಟ

    ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 7.76 ಲಕ್ಷ ಗ್ರಾಹಕರು ಇದ್ದಾರೆ. 1.25 ಲಕ್ಷ ಭಾಗ್ಯಜ್ಯೋತಿ ಬಳಕೆದಾರರಿದ್ದಾರೆ. 4.43 ಲಕ್ಷ ಗೃಹ ಬಳಕೆದಾರರು, 64,368 ವಾಣಿಜ್ಯ ಬಳಕೆದಾರರು, 95 ಸಾವಿರ ಜನರು ಪಂಪ್‌ಸೆಟ್ ಹೊಂದಿದ್ದಾರೆ. ಪ್ರತಿ ತಿಂಗಳು 20.66 ಕೋಟಿ ರೂ. ವಿದ್ಯುತ್ ಬಿಲ್ ಆಗುತ್ತದೆ. ಅದರಲ್ಲಿ 18 ಕೋಟಿ ರೂ. ಪಾವತಿ ಆಗುತ್ತಿದೆ.

    ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್

    ಬಳ್ಳಾರಿ ಥರ್ಮಲ್ ವಿದ್ಯುತ್ ಸ್ಥಾವರ (ಬಿಟಿಪಿಎಸ್)ದಿಂದ ವಿದ್ಯುತ್ ಪೂರೈಸಲಾಗುತ್ತದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಏಳು ಗಂಟೆ ತ್ರಿಫೇಸ್‌ನಲ್ಲಿ ವಿದ್ಯುತ್ ಕೊಡಲಾಗುತ್ತಿದೆ. 70 ಮೆಗಾವಾಟ್ ಸೌರವಿದ್ಯುತ್ ಪೂರೈಕೆ ಆಗುತ್ತಿದೆ.

    ಇದನ್ನೂ ಓದಿ: “ಏನೇ ಆಗ್ಲಿ ಕರೆಂಟ್ ಬಿಲ್ ಕಟ್ಟಲ್ಲ” ಎಂದ ಮಹಿಳೆ; ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ ಫ್ರೀ ಕರೆಂಟ್​ ಬೇಡಿಕೆ!


    ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಗೆ ಕಟ್ಟಬೇಕಾದ ಬಾಕಿ ಮೊತ್ತ 845.36 ಕೋಟಿ ರೂಪಾಯಿ. ಅದರಲ್ಲಿ ಭಾಗ್ಯ ಜ್ಯೋತಿ ಯೋಜನೆಯಡಿ 22.73 ಕೋಟಿ ರೂ. ಸರ್ಕಾರ ಪಾವತಿಸಬೇಕಿದೆ.

    ಗೃಹಬಳಕೆಯಿಂದ ಬರಬೇಕಾದ ಬಾಕಿ 88.31 ಕೋಟಿ ರೂ., ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್ ಬಾಕಿ 158.58 ಕೋಟಿ ರೂ., ಬೀದಿ ದೀಪ ಹಾಗೂ ಕುಡಿವ ನೀರಿನ ಬಳಕೆಗೆ ಬಳಸಿದ ವಿದ್ಯುತ್ ಬಿಲ್ 546.36 ಕೋಟಿ ರೂ., ಏತ ನೀರಾವರಿ ಯೋಜನೆಗಳಿಗೆ ಬಳಸಿದ ವಿದ್ಯುತ್ ಬಾಕಿ ಮೊತ್ತ 29.38 ಕೋಟಿ ರೂ. ಜೆಸ್ಕಾಂಗೆ ಬರಬೇಕಿದೆ.
    ಮನೆಯೊಂದಕ್ಕೆ 450 ರೂ. ವೆಚ್ಚ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts