More

    ‘ರಾಜೀವ್​ ಗಾಂಧಿ ಏನು ಮಾಡಿದರು ಎಂಬುದರ ಬಗ್ಗೆ ಕಾಂಗ್ರೆಸ್​​ನಲ್ಲೇ ತುಂಬ ಗೊಂದಲವಿದೆ’

    ನವದೆಹಲಿ: ಬಾಬ್ರಿ ಮಸೀದಿ ಲಾಕ್​ ಓಪನ್​ ಮಾಡಿದ್ದು ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರು ಹೌದೋ..ಅಲ್ಲವೋ ಎಂಬ ವಿಷಯದ ಬಗ್ಗೆ ಕಾಂಗ್ರೆಸ್​​ಗೇ ಗೊಂದಲವಿದೆ ಎಂದು ರಾಜ್ಯಸಭಾ ಸಂಸದ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ವ್ಯಂಗ್ಯವಾಡಿದ್ದಾರೆ.

    ಒಂದು ಕಡೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್​ ಹೇಳುತ್ತಾರೆ, ಬಾಬ್ರಿ ಮಸೀದಿಯ ಬೀಗ ತೆಗೆದಿದ್ದೇ ರಾಜೀವ್​ ಗಾಂಧಿಯವರು ಎಂದು. ಇನ್ನೊಂದು ಕಡೆ ಕಾಂಗ್ರೆಸ್​ ಮುಖಂಡ ಶಶಿ ತರೂರ್​ ಅವರು, ಬಾಬ್ರಿ ಮಸೀದಿ ಬೀಗಗಳನ್ನು ಒಡೆಸಿದ್ದು, ರಾಜೀವ್​ ಗಾಂಧಿ ಅಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ತಮ್ಮ ನಾಯಕ ರಾಜೀವ್​ ಗಾಂಧಿ ಏನು ಮಾಡಿದ್ದರು ಎಂಬ ಬಗ್ಗೆ ಅವರದ್ದೇ ಪಕ್ಷದ ಈಗಿನ ಮುಖಂಡರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ

    ಇನ್ನು ರಾಜ್ಯದಲ್ಲಿ ಕರೊನಾ ವೈರಸ್​ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಸಿಂಧಿಯಾ, ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಅವರು ಕರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ದಿನಕ್ಕೆ 18-20 ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
    ಸಿಂಧಿಯಾ ಅವರು ಬಿಜೆಪಿಗೆ ಸೇರಿದ ನಂತರ ಇಂದು ಮೊದಲ ಬಾರಿಗೆ ಇಂಧೋರ್​ಗೆ ಆಗಮಿಸಿದ್ದಾರೆ. ಇಲ್ಲಿನ ಸಚಿವ ತುಳಸಿ ಸಿಲಾವತ್​ ಮತ್ತು ಇತರ ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಿದರು. (ಏಜೆನ್ಸೀಸ್​)

    ಬಿಎಸ್​ಎಫ್​ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್​ ಆಸ್ತಾನಾ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts