More

    ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನ ಟೂಲ್‌ಕಿಟ್ ಸುದ್ದಿಗಳು ಸದ್ದು ಮಾಡುತ್ತಿವೆ; ಬಿಜೆಪಿ ಆಕ್ರೋಶ

    ಬೆಂಗಳೂರು: ಶಿಕ್ಷಣದಲ್ಲಿ ಹಿಜಾಬ್ ವಿವಾದ, ವ್ಯಾಪಾರದಲ್ಲಿ ಧರ್ಮ ಸಂಘರ್ಷಗಳ ನಡುವೆಯೇ ಮತ್ತೊಂದು ವಿವಾದ ಉಂಟಾಗುವ ಲಕ್ಷಣಗಳು ಗೋಚರಿಸಿತ್ತು. ರಾಜ್ಯದಲ್ಲಿ ಹತ್ತು ಮುಸ್ಲಿಂ ಕಾಲೇಜುಗಳು ತಲೆ ಎತ್ತಲಿದ್ದು, ಈಗಾಗಲೇ ತಯಾರಿಗಳು ಆರಂಭವಾಗಿವೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗಿತ್ತು.

    ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲು ಬೇಡಿಕೆ ಬಂದಿದ್ದು, ವಕ್ಫ್​ ಬೋರ್ಡ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆ ಮೇರೆಗೆ ಸರ್ಕಾರ ಮುಸ್ಲಿಂ ಕಾಲೇಜು ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿತ್ತು.

    ಇದೀಗ ರಾಜ್ಯದಲ್ಲಿ ಮುಸ್ಲಿಂ ಕಾಲೇಜು ನಿರ್ಮಾಣವಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮುಜರಾಯಿ, ​ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಮುಸ್ಲಿಂ ಕಾಲೇಜುಗಳ ಪ್ರಾರಂಭದ ಬಗ್ಗೆ ವಕ್ಬ್ ಬೋರ್ಡ್ ಅಧ್ಯಕ್ಷರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಈ ವಿಷಯದ ಕುರಿತು ನಾನು ಈಗಾಗಲೇ ವಕ್ಬ್ ಬೋರ್ಡ್ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ.

    ಪ್ರತ್ಯೇಕ ಮುಸ್ಲಿಂ ಕಾಲೇಜು ಪ್ರಾರಂಭದ ಬಗ್ಗೆ ಆಗುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾಂಭಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಈಗಾಗಲೇ ಸರಕಾರ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದೆ ಎನ್ನುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.

    ರಾಜ್ಯದಲ್ಲಿ ಮುಸ್ಲಿಂ ಕಾಲೇಜು ನಿರ್ಮಾಣವಾಗುತ್ತದೆ ಎಂಬ ವಿಚಾರದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಇದೀಗ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನ ಟೂಲ್‌ಕಿಟ್ ಸುದ್ದಿಗಳೂ ಆರಂಭವಾಗಿದೆ.‌ ಅದರಲ್ಲೊಂದು ಈ‌‌ ಮುಸ್ಲಿಂ ಕಾಲೇಜು ಸುದ್ದಿ. ಇಂತಹ ಅನಗತ್ಯ ಸುದ್ದಿಯನ್ನು ಹಬ್ಬಿಸುವ ಮೂಲಕ ಕಾಂಗ್ರೆಸ್ ತನಗೆ ಯಾವುದೇ ಕೆಲಸ ಇಲ್ಲೆ ಎಂಬುವುದನ್ನು ಸ್ಪಷ್ಟಪಡಿಸಿದೆ ಎಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts