More

    ಕೈತಪ್ಪದ ಅಹಿಂದ ಮತ, ಸೋತರೂ ಕಾಂಗ್ರೆಸ್​ಗೆ ಸಮಾಧಾನ..

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಉಪಸಮರದಲ್ಲಿ ಕಾಂಗ್ರೆಸ್​ನ ಮತಗಳಿಕೆ ಗಮನಿಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗಿರುವ ಅಹಿಂದ ಮತಗಳು ಕದಲದೆ ಇರುವುದು ಸ್ಪಷ್ಟವಾಗಿ ಗೋಚರಿಸಿದೆ. ಚುನಾವಣೆಗೆ ಮುನ್ನ ತರಿಸಿಕೊಂಡ ವರದಿಗಳಲ್ಲಿ ಕಾಂಗ್ರೆಸ್ ಸಿಂದಗಿಯಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಹಾನಗಲ್​ನಲ್ಲಿ ಪ್ರಬಲ ಪೈಪೋಟಿ ಕಾಣಿಸಿತ್ತು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕ್ಷೇತ್ರದಲ್ಲಿ ಹೆಚ್ಚಿನ ಬೆವರು ಹರಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಲ್ಲಿ ಕೊನೆಯ ದಿನಗಳಲ್ಲಿ ಮೈಮರೆತಿದ್ದರ ಅನುಭವ ಪಾಠವನ್ನು ಮನಸ್ಸಿನಲ್ಲಿಟ್ಟುಕೊಂಡು ಇಲ್ಲಿ ಎಚ್ಚರಿಕೆ ವಹಿಸಿದ್ದರು. ಹಾಗೆಯೇ, ಶ್ರೀನಿವಾಸ ಮಾನೆ ವೈಯಕ್ತಿಕ ನಡವಳಿಕೆ ಅವರ ಗೆಲುವಿಗೆ ಸಹಕಾರಿಯಾಗಿದ್ದು ಇನ್ನೊಂದು ಭಾಗ.

    ಸಿಂದಗಿಯಲ್ಲಿ ಸೋತರೂ ಕಾಂಗ್ರೆಸ್​ಗೆ ಸಮಾಧಾನ ತಂದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದ ಪಕ್ಷ ಈಗ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಎರಡೂ ಕ್ಷೇತ್ರಗಳ ಮತ ಹಂಚಿಕೆಯು ಕಾಂಗ್ರೆಸ್​ಗೆ ಇದ್ದ ಅಳುಕನ್ನೂ ದೂರ ಮಾಡಿದೆ. ಜೆಡಿಎಸ್ ತಂತ್ರಗಾರಿಕೆಯನ್ನು ಪುಡಿಗಟ್ಟಲು ಸಿದ್ದರಾಮಯ್ಯ ಮುಸ್ಲಿಂ ಶಾಸಕರಿಗೆ ವಿಶೇಷ ಹೊಣೆ ವಹಿಸಿದ್ದರು. ಅವರೆಲ್ಲರೂ ತಳಮಟ್ಟದಲ್ಲಿ ಕೆಲಸ ಮಾಡಿದ್ದು ಫಲಕೊಟ್ಟಿದೆ. ಒಂದು ವೇಳೆ ಜೆಡಿಎಸ್ ಪ್ರಯೋಗ ಯಶಸ್ವಿಯಾಗಿದ್ದರೆ, 2023ರ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹೆಚ್ಚು ಕ್ಷೇತ್ರದಲ್ಲಿ ನಿಲ್ಲಿಸುವ ಸಾಧ್ಯತೆ ಇತ್ತು. ಆದರೆ, ಜೆಡಿಎಸ್​ನ ತಂತ್ರವನ್ನು ಮೊಳಕೆಯಲ್ಲೇ ಚಿವುಟುವ ಕೈ ನಾಯಕರ ಪ್ರಯತ್ನ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಬಹುದಾಗಿದೆ.

    ಕ್ರೆಡಿಟ್ ಯಾರಿಗೆ?: ಸಿಂದಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಡಿ.ಕೆ.ಶಿವಕುಮಾರ್ ಅವರದ್ದು, ಹೀಗಾಗಿ ಅಲ್ಲಿ ಸೋತಿದೆ. ಈ ಸೋಲಿನ ಹೊಣೆ ಅವರೇ ಹೊರಬೇಕು ಎಂಬ ವಾದ ಸಿದ್ದರಾಮಯ್ಯ ಬಣದಲ್ಲಿದೆ. ಅದೇ ರೀತಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯರ ಮಾತು ಮುಳುವಾಗುವ ಸಾಧ್ಯತೆ ಇತ್ತು, ಮುಂದಾದರೂ ಅವರು ತಮ್ಮ ನಡವಳಿಕೆ ಸುಧಾರಿಸಿಕೊಳ್ಳಬೇಕೆಂಬ ಅಭಿಪ್ರಾಯ ಡಿಕೆಶಿ ಬಣದಲ್ಲಿದೆ. ಇನ್ನು ಹಾನಗಲ್ ಗೆಲುವಿನ ಕ್ರೆಡಿಟ್ ಪಡೆದುಕೊಳ್ಳಲು ಎರಡೂ ಬಣದವರು ಪೈಪೋಟಿ ನಡೆಸಿದ್ದಾರೆ.

    ಈ ಹಿಂದೆ ಹೇಳಿದಂತೆ ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಬಿಜೆಪಿ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಹಾನಗಲ್ ಫಲಿತಾಂಶ ಬರೀ ಸಿಎಂಗೆ ಸಂಬಂಧಪಟ್ಟ ವಿಚಾರವಲ್ಲ. ಇಡೀ ಸರ್ಕಾರ ಹಾಗೂ ಬಿಜೆಪಿಗೆ ಆಗಿರುವ ಮುಖಭಂಗ. ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಮತದಾರ ಬೇಸತ್ತಿದ್ದು, ಅದನ್ನು ಬದಲಿಸಲು ನಿರ್ಧರಿಸಿದ್ದಾನೆ. ಅದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಎರಡು ದಿನ ಹರಸಾಹಸ ಪಟ್ಟು ಅಂತಿಮದರ್ಶನ ಪಡೆದಿದ್ದ ಪುನೀತ್​ ಅಭಿಮಾನಿ, ಹೃದಯಾಘಾತಕ್ಕೀಡಾಗಿ ಇಂದು ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts