More

    VIRAL VIDEO | ಆತನೊಬ್ಬ ‘ಹುಚ್ಚು ಒಂಟೆ’! ವೈರಲ್ ಆಯ್ತು ಕಾಂಗ್ರೆಸ್​ ನಾಯಕನ ಹೇಳಿಕೆ

    ರಾಜಸ್ಥಾನ: ಲೋಕಸಭೆ ಚುನಾವಣೆ 2024 ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿ ಭುಗಿಲೆದ್ದಿವೆ. ಅದರಲ್ಲೂ ಎದುರಾಳಿ ನಾಯಕರನ್ನು ಟೀಕಿಸುವುದು, ವ್ಯಂಗ್ಯವಾಡವುದು ಹೆಚ್ಚಾಗಿಯೇ ಸದ್ದು ಮಾಡುತ್ತಿದೆ. ಸದ್ಯ ಇದೇ ರೀತಿಯಲ್ಲಿ ರಾಜಸ್ಥಾನದ ಕಾಂಗ್ರೆಸ್​ ನಾಯಕರೊಬ್ಬರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಇದನ್ನೂ ಓದಿ: ಕಲ್ಲು ಹೂವಿನ ನೆರಳು ಕಥಾ ಸಂಕಲನ ಪರಿಚಯ, ಓದಿಗೆ ಬದುಕು ಕಟ್ಟುವ ಶಕ್ತಿ ಇದೆ ಎಂದ ಉಮಾ ಪಾಟೀಲ

    ರಾಜಸ್ಥಾನದಲ್ಲಿ, ಬಾರ್ಮರ್-ಜೈಸಲ್ಮೇರ್ ಹೋರಾಟವು ಕಠಿಣವಾಗುತ್ತಿದೆ. ಈ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕ ಹೇಮರಾಮ್ ಚೌಧರಿ ಅವರು ಶಿವ ವಿಧಾನಸಭೆಯ ಸ್ವತಂತ್ರ ಶಾಸಕರಾದ ರವೀಂದ್ರ ಸಿಂಗ್ ಭಾಟಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವಿಡಿಯೋಗೆ ಹಲವರು ಕೆಂಡಕಾರಿದ್ದಾರೆ.

    ಮಾರ್ಚ್ 28ರ ಗುರುವಾರ ಗುಡಮಲಾನಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಹೇಮಾರಾಮ್ ಚೌಧರಿ, “ರವೀಂದ್ರ ಭಾಟಿಯನ್ನು ಮಾರ್ವಾಡಿ ಭಾಷೆಯಲ್ಲಿ ‘ಖಿಜೋಡೊ’ ಎಂದು ಕರೆದರು. ಅಸಲಿಗೆ ಖಿಜೋಡೊ ಅಂದರೆ ‘ಯಾರ ಹಿಡಿತವಿಲ್ಲದ ಹುಚ್ಚು ಒಂಟೆ’ ಎಂದರ್ಥ. ಅವರು ಪಕ್ಷದ ಬೆಂಬಲವಿಲ್ಲದ ಬಂಡಾಯ ರಾಜಕೀಯದಲ್ಲಿ ಹೆಚ್ಚಿನದನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಹೇಳಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿದೆ.

    ಇದನ್ನೂ ಓದಿ: ಕಡ್ಡಾಯ ಮತದಾನ ಪ್ರಜಾಪ್ರಭುತ್ವದ ಬುನಾದಿ – ತಾಪಂ ಇಒ ವಿಶ್ವನಾಥ ಹೊಸಮನಿ

    ರಾಜಸ್ಥಾನದ ಚುನಾವಣಾ ರಣರಂಗ ಕಾವೇರುತ್ತಿದ್ದು, ರಾಜಸ್ಥಾನದ ಬಾರ್ಮರ್-ಜೈಸಲ್ಮೇರ್ ಸೀಟು ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಿದೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರನ್ನು ಬಿಜೆಪಿ ಸತತ ಎರಡನೇ ಬಾರಿಗೆ ತನ್ನ ಅಭ್ಯರ್ಥಿ ಎಂದು ಘೋಷಿಸಿದರೆ, ಕಾಂಗ್ರೆಸ್ ಆರ್‌ಎಲ್‌ಪಿ ನಾಯಕ ಉಮೇದರಾಮ್ ಬೇನಿವಾಲ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ.

    ಈ ಮಧ್ಯೆ ಬಿಜೆಪಿಯ ಬಂಡಾಯ ಮತ್ತು ಶಿವ ವಿಧಾನಸಭೆಯ ಸ್ವತಂತ್ರ ಶಾಸಕ ರವೀಂದ್ರ ಸಿಂಗ್ ಭಾಟಿ ಬಾರ್ಮರ್-ಜೈಸಲ್ಮೇರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆಂದು ಹೇಳಲಾಗಿದೆ. ಆದರೆ ರಾಜಕೀಯ ತಜ್ಞರ ಪ್ರಕಾರ, ಭಾಟಿ ಚುನಾವಣೆಗೆ ಸ್ಪರ್ಧಿಸಿದರೆ, ಅವರು ಕಾಂಗ್ರೆಸ್ ಮತ್ತು ಬಿಜೆಪಿ ಆಟದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಹುದು ಎಂದು ನಂಬಲಾಗಿದೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದು ಖಚಿತ! ಆದರೆ ರಾಜ್ಯದಲ್ಲಿ ಬಿಜೆಪಿ… ಭವಿಷ್ಯ ನುಡಿದ ಹಿರಿಯ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts