More

    ಬಿಸಿಸಿಐ-ಐಸಿಸಿ ಜಟಾಪಟಿ; ತೆರಿಗೆ ವಿನಾಯಿತಿಗಾಗಿ ವಾಕ್ಸಮರ

    ದುಬೈ: ತೆರಿಗೆ ವಿನಾಯಿತಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಹುದಿನಗಳಿಂದ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವಿನ ಸಮರ ತಾರಕಕ್ಕೇರಿದೆ. ಈ ಕುರಿತು ಉಭಯ ಮಂಡಳಿಗಳ ನಡುವೆ ನಡೆದಿರುವ ಇ-ಮೇಲ್ ಸಂದೇಶಗಳ ಕುರಿತು ಗುರುವಾರ ನಡೆದ ಐಸಿಸಿ ಸಭೆ ವೇಳೆಯಲ್ಲೂ ಬಿಸಿ ಬಿಸಿ ಚರ್ಚೆಯಾಗಿದೆ. ಮಧ್ಯಾಹ್ನ 3.30ಕ್ಕೆ ಆರಂಭಗೊಂಡ ವಿಡಿಯೋ ಕಾನ್ಪೆರೆನ್ಸ್ ಸಭೆ ಸುಮಾರು ಎರಡು ಗಂಟೆಗಳ ಕಾಲ ಜರುಗಿತು. ಈ ವೇಳೆ ಬಿಸಿಸಿಐ ಹಾಗೂ ಐಸಿಸಿ ನಡುವಿನ ತೆರಿಗೆ ವಿನಾಯಿತಿ ನಡುವಿನ ಚರ್ಚೆಯೇ ಹೆಚ್ಚಾಗಿ ನಡೆಯಿತು ಎಂದು ತಿಳಿದು ಬಂದಿದೆ. ಭಾರತದಲ್ಲಿ ನಿಗದಿಯಾಗಿರುವ 2021ರ ಟಿ20 ವಿಶ್ವಕಪ್ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ ಯೋಚಿಸುವುದಾಗಿಯೂ ಇದೇ ವೇಳೆ ಐಸಿಸಿ ಮತ್ತೊಮ್ಮೆ ಬಿಸಿಸಿಐಗೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ, ಲಾಕ್​ಡೌನ್ ವೇಳೆಯಾಗಿರುವುದರಿಂದ ತೆರಿಗೆ ವಿನಾಯಿತಿ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲು ಜೂನ್ 30 ರವರೆಗೆ ಸಮಯಾವಕಾಶ ಕೇಳಿಕೊಂಡಿದೆ ಎನ್ನಲಾಗಿದೆ.

    ಇದನ್ನೂ ಓದಿ: ಮೋದಿ ಗೆದ್ದೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಇನ್ನಿಲ್ಲ; ಸಾವಿನಲ್ಲೂ ಗೊಂದಲ…!

    2021ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಗಳ ಆತಿಥ್ಯ ಈಗಾಗಲೇ ಭಾರತಕ್ಕೆ ದಕ್ಕಿದೆ. ಈ ಸಂಬಂಧ ಟೂರ್ನಿ ಆಯೋಜಿಸಲು ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಕೊಡಿಸಬೇಕೆಂದು ಐಸಿಸಿ, ಬಿಸಿಸಿಐಗೆ ಮೇಲಿಂದ ಮೇಲೆ ಒತ್ತಡ ಹೇರುತ್ತಾ ಬಂದಿದೆ. 2019ರ ಡಿಸೆಂಬರ್​ವರೆಗೆ ಐಸಿಸಿ ಮೊದಲ ಗಡುವು ನೀಡಿತ್ತು. ಬಳಿಕ ಬಿಸಿಸಿಐ ಮನವಿ ಮೇರೆಗೆ ಈ ಅವಧಿಯನ್ನು ಮೇ 18ರವರೆಗೆ ವಿಸ್ತರಿಸಿತ್ತು.

    ಇದನ್ನೂ ಓದಿ: ಬಂದಷ್ಟೇ ವೇಗದಲ್ಲಿ ಮಿಂಚಿ ಮರೆಯಾದ ತಾರೆ ನೀಲ್ ಜಾನ್ಸನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts