More

  ಉಮೇಶ್ ಕತ್ತಿ ನಿಧನಕ್ಕೆ ಸುತ್ತೂರು ಶ್ರೀಗಳಿಂದ ಸಂತಾಪ

  ಮೈಸೂರು: ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.


  ಉಮೇಶ್ ಕತ್ತಿ ವಿಧಿವಶರಾಗಿರುವುದು ಅತ್ಯಂತ ದುಃಖದಾಯಕ ಸಂಗತಿ. ಕತ್ತಿಯವರು ಆಹಾರ, ನಾಗರೀಕ ಸರಬರಾಜು ಮತ್ತು ಅರಣ್ಯ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆ ವಿಶ್ವನಾಥ್ ಕತ್ತಿಯವರ ಅಗಲುವಿಕೆಯ ನಂತರ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ, ಅಪಾರ ಜನಪ್ರಿಯತೆ ಗಳಿಸಿದ್ದರು.

  ಹುಕ್ಕೇರಿ ವಿಧಾನಸಭೆ ಕ್ಷೇತ್ರದಿಂದ ಸತತ ಆರು ಬಾರಿ ಆಯ್ಕೆಯಾದದ್ದು, ಅವರು ಎಷ್ಟು ಜನಾನುರಾಗಿಯಾಗಿದ್ದರೆಂಬುದರ ದ್ಯೋತಕ. ನೇರ ನಡೆ-ನುಡಿಯವರು. ಉತ್ತರ ಕರ್ನಾಟಕದ ನಾಯಕರಲ್ಲೊಬ್ಬರಾಗಿದ್ದರು. ಅವರು ಹೀಗೆ ಅನಿರೀಕ್ಷಿತವಾಗಿ ಹೃದಯಾಘಾತದಿಂದ ಅಗಲಿರುವುದು ರಾಜ್ಯ ರಾಜಕೀಯದಲ್ಲಿ ಒಂದು ರೀತಿಯ ನಿರ್ವಾತವನ್ನು ಉಂಟುಮಾಡಿದೆ. ಅವರು ಶ್ರೀಮಠಕ್ಕೆ ಆಗಿಂದಾಗ್ಗೆ ಆಗಮಿಸುತ್ತಿದ್ದುದು ನಮ್ಮ ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಈ ಅನಿರೀಕ್ಷಿತ ಘಟನೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಾ, ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬವರ್ಗದವರು, ಬಂಧು-ಬಾಂಧವರು ಮತ್ತು ಅಪಾರ ಅಭಿಮಾನಿ ವೃಂದಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  See also  ನಾಳೆ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts