More

    ಕರವೇ ಕಾರ್ಯಕರ್ತರ ಬಂಧನಕ್ಕೆ ಖಂಡನೆ

    ಇಂಡಿ: ಕನ್ನಡನಾಡಿನ ಉಳಿವಿಗಾಗಿ ಸದಾ ಹೋರಾಟ ಮಾಡುತ್ತಿರುವ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಝಳಕಿ ಕರವೇ ವಲಯ ಅಧ್ಯಕ್ಷ ರವಿಕುಮಾರ ಹೂಗಾರ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ತಾಲೂಕಿನ ಬಳ್ಳೊಳ್ಳಿಯಲ್ಲಿ ಉಪತಹಸೀಲ್ದಾರ್ ಎಸ್.ಎ. ಗೋಟ್ಯಾಳ ಅವರಿಗೆೆ ಮನವಿ ಸಲ್ಲಿಸಿದರು.

    ರವಿಕುಮಾರ ಹೂಗಾರ ಮಾತನಾಡಿ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕನ್ನಡದ ನಾಮಫಲಕಗಳನ್ನು ಅಳವಡಿಸದೆ ತಮಗೆ ಬೇಕಾದ ಭಾಷೆಯಲ್ಲಿ ನಾಮಫಲಕ ಅಳವಡಿಸುತ್ತಿರುವುದಕ್ಕೆ ಕರವೇ ಹೋರಾಟ ನಡೆಸುತ್ತಿದೆ. ಅದಕ್ಕೆ ಬೆಂಬಲಿಸಬೇಕಿದ್ದ ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರನ್ನೇ ಬಂಧಿಸಿರುವುದು ಎಷ್ಟು ಸರಿ ಎಂದರು.

    ಜಿಲ್ಲೆಯ ಕರವೇ ಕಾರ್ಯಕರ್ತರಾದ ಎಂ.ಸಿ. ಮುಲ್ಲಾ, ಬಾಳು ಮುಳಜಿ, ಸಂತೋಷ ಪಾಟೀಲ ಅವರು ಹೋರಾಟದಲ್ಲಿ ಪಾಲ್ಗೊಂಡಿದ್ದು ಅವರನ್ನೂ ಬಂಧಿಸಲಾಗಿದೆ. ಹೋರಾಟಗಾರರ ಮೇಲೆ ಕೇಸ್ ದಾಖಲಿಸಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

    ಬಾಲಕೃಷ್ಣ ಭೋಸಲೆ, ಪ್ರವೀಣ ಕಾಪಸೆ, ಅಮೋಗಿ ದಾಳೆ, ನಿರಂಜನ ಪೂಜಾರಿ, ಉಮೇಶ ಕಾರ್ಕಳ, ರೇವಣ್ಣ ತಳವಾರ, ಹೇಮಂತ ಹಡಸಂಗಿ, ಪ್ರಕಾಶ ಬಿರಾದಾರ, ರಾಜು ಕಾಸರ, ಶಂಕರ ಬಡಿಗೇರ, ಆನಂದ ಕ್ಷತ್ರಿ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts