More

    ಬಣಜಿಗರ ಹೆಸರಿನಲ್ಲಿ ಯತ್ನಾಳ-ಕಾಶಪ್ಪನವರ ವಿರುದ್ಧ ಆರೋಪಕ್ಕೆ ಖಂಡನೆ : ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

    ಇಂಡಿ: ಬಣಜಿಗರ ಹೆಸರಿನಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರಾದ ಶಾಸಕ ಬಸವನಗೌಡ ಪಾಟೀಲ ಯಾತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜ ಮುಖಂಡರು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಅವರ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಿದರು.

    ಪಂಚಮಸಾಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮಶೇಖರ ದೇವರ ಮಾತನಾಡಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಎರಡು ವರ್ಷಗಳಿಂದ ರಾಜ್ಯದಲ್ಲಿ ನಿರಂತರ ಚಳವಳಿ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ ಎಂದರು.

    ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಆಮಿಷಕ್ಕೆ ಒಳಗಾಗಿ ರಾಷ್ಟ್ರಮಟ್ಟದಲ್ಲಿ ಲಿಂಗಾಯತ ನಾಯಕರಾಗಿ ಬೆಳೆಯುತ್ತಿರುವ ಬಸವನಗೌಡ ಪಾಟೀಲರು ಹಾಗೂ ವಿಜಯಾನಂದ ಕಾಶಪ್ಪನವರ ಅವರ ಬೆಳವಣಿಗೆಯನ್ನು ಸಹಿಸದೆ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತ ಅವರ ಭಾವಚಿತ್ರ ಸುಟ್ಟು ಹಾಕುತ್ತಿರುವುದು ನಮ್ಮ ಸಮಾಜಕ್ಕೆ ತೀವ್ರ ನೋವಾಗಿದೆ ಎಂದು ವಿಷಾದಿಸಿದರು.

    ಪಂಚಮಸಾಲಿ ಹಾಗೂ ಬಣಜಿಗ ಸಮಾಜದವರು ರಾಜ್ಯದಲ್ಲಿ ಸಹೋದರರಂತೆ ಬಾಳುತ್ತಿದ್ದೇವೆ. ನಾವು ಇದುವರೆಗೂ ಅವರನ್ನು ನಮ್ಮ ಬೀಗರು ಎಂದು ಸಂಬೋಧಿಸುತ್ತ ಗೌರವದಿಂದ ಕಾಣುತ್ತ ಬಂದಿದ್ದೇವೆ. ಆದ್ದರಿಂದ ನಮ್ಮ ನಾಯಕರ ತೇಜೋವಧೆ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ಅಶೋಕಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಬಸವರಾಜ ಮಡಗೊಂಡ, ಅನಿಲಕುಮಾರ ಬಿರಾದಾರ, ಉಮೇಶ ಲಚ್ಯಾಣ, ಶಿವನಗೌಡ ಬಿರಾದಾರ, ಸಿದ್ದರಾಮ ಗೊರನಾಳ, ಪ್ರವೀಣ ಸಲಗರ, ರಾಜಗುರು ದೇವರ, ಶಾಂತು ದೇವರ, ಸಂತೋಷ ಬಿರಾದಾರ, ರಾಘವೇಂದ್ರ ಗಡಗಲಿ, ಮಹಾದೇವ ಹದಗಲ್, ಶರಣಗೌಡ ಬಂಡಿ, ನಿಂಗನಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಶ್ರೀಶೈಲ ಕೋರಿ, ಈರಣ್ಣ ಸಿಂದಗಿ, ಮುತ್ತು ಸಿಂದಗಿ, ಅಶೋಕ ಅಕಲಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts