More

    ವೈದ್ಯರು ದೇವರ ಸಮಾನ

    ಇಂಡಿ: ವೈದ್ಯೋ ನಾರಾಯಣ ಹರಿ, ದೇವರು ಮನುಷ್ಯನಿಗೆ ಜನ್ಮ ನೀಡಿದರೆ, ಜೀವವನ್ನು ಕಾಪಾಡುವ ವೈದ್ಯರು ಜನ್ಮ ನೀಡಿದ ದೇವರಷ್ಟೇ ಶ್ರೇಷ್ಠರು ಎಂದು ನಾಗಣಸೂರದ ಶ್ರೀಕಂಠ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಸದ್ಗುರು ಶಾಂತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬಿಎಲ್‌ಡಿಇಯ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ ಬುಧವಾರ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶಿಬಿರದ ಸಂಚಾಲಕ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಬಿಎಲ್‌ಡಿಇ ಆಸ್ಪತ್ರೆ ಸಾಮಾನ್ಯ ಜನರ ಆರೋಗ್ಯ ಕಾಳಜಿಗೆ ಸದಾ ಸಿದ್ಧವಿದೆ. ನಿರಂತರವಾಗಿ ಆಸ್ಪತ್ರೆಯ ವತಿಯಿಂದ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಯಾವುದೇ ತರಹದ ಕಾಯಿಲೆಗೆ ಶಿಬಿರದಲ್ಲಿ ಲಭ್ಯವಿರುವ ವಿವಿಧ ತಜ್ಞ ವೈದ್ಯರಿಂದ ಉಚಿತ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ತಪಾಸಣೆ ಅಥವಾ ಶಸ್ತ್ರ ಚಿಕಿತ್ಸೆಯ ಅವಶ್ಯವಿದ್ದಲ್ಲಿ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು.

    ಶಾಂತೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕಾಸುಗೌಡ ಬಿರಾದಾರ, ಶಿಕ್ಷಕ ದಶರಥ ಕೋರಿ ಮಾತನಾಡಿದರು. ಸುರೇಶ ಅವರಾದಿ, ರಮೇಶ ಕುಲಕರ್ಣಿ, ಉಮೇಶ ಶಿವಯೋಗಿಮಠ, ಬಸು ದೇವರ, ರವಿ ವಂದಾಲ, ಶಾಂತೇಶ್ವರ ಜಾತ್ರಾ ಮಹೋತ್ಸವ ಕಮಿಟಿಯ ಪ್ರಕಾಶ ಬಿರಾದಾರ, ಅನಿಲಗೌಡ ಬಿರಾದಾರ, ಬಸವರಾಜ ದೇವರ, ಭೀಮು ಪ್ರಚಂಡಿ ಮತ್ತಿತರಿದ್ದರು.

    ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರಾದ ಡಾ. ಮಂಜುನಾಥ ಸಾವಂತ, ಡಾ. ಪೂರ್ಣಚಂದ್ರ ನಿಗಡಿ, ಡಾ. ಅತುಲ ಥೊಬ್ಬಿ, ಡಾ. ಸಂಜಿತ, ಡಾ. ನಿವೇದಾ, ಪ್ರಕಾಶ ದೇಗಿನಾಳ, ಸಾರ್ವಜನಿಕ ಸಂಪರ್ಕಾಧಿಕಾರಿ ಶಾಂತೇಶ, ರಕ್ತ ಭಂಡಾರದ ಅಶೋಕ ಪಾಟೀಲ, ಸಿದ್ದು ಪೂಜಾರಿ ಭಾಗವಹಿಸಿದ್ದರು. 250ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಿ, ಸುಮಾರು 60 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಾಗಲು ಶಿಫಾರಸ್ಸು ಮಾಡಲಾಯಿತು. 8 ಜನರು ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts