More

    ಅಭ್ಯಾಸದ ವೇಳೆ ತಲೆಗೆ ಚೆಂಡೇಟು, ಮೊದಲ ಟೆಸ್ಟ್‌ನಿಂದ ಮಯಾಂಕ್ ಅಗರ್ವಾಲ್ ಔಟ್

    ನಾಟಿಂಗ್‌ಹ್ಯಾಂ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸಲು ಸಜ್ಜಾಗುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಸೋಮವಾರ ಅಭ್ಯಾಸದ ವೇಳೆ ವೇಗಿ ಮೊಹಮದ್ ಸಿರಾಜ್ ಎಸೆತದಲ್ಲಿ ತಲೆಗೆ ಏಟು ತಿಂದಿದ್ದಾರೆ. ಇದರಿಂದ ಅವರು ಕನ್‌ಕಷನ್ ಪರೀಕ್ಷೆಗೆ ಒಳಪಟ್ಟು, ಅದರಲ್ಲಿ ವಿಫಲರಾದ ಕಾರಣದಿಂದಾಗಿ ಬುಧವಾರದಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

    ಟೀಮ್ ಇಂಡಿಯಾದ ಹಾಲಿ ಬೌಲರ್‌ಗಳಲ್ಲಿ ಅತ್ಯಂತ ವೇಗಿ ಎನಿಸಿರುವ ಸಿರಾಜ್ ಅವರ ಶಾರ್ಟ್ ಬಾಲ್ ಮಯಾಂಕ್ ತಲೆಗೆ ಬಡಿಯಿತು. ಅವರು ಹೆಲ್ಮೆಟ್ ಧರಿಸಿದ್ದರೂ ಚೆಂಡಿನ ಬಲವಾದ ಏಟಿಗೆ ತತ್ತರಿಸಿದರು. ಬಳಿಕ ಅಭ್ಯಾಸದಿಂದ ಹೊರನಡೆದ ಅವರ ಮೇಲೆ ವೈದ್ಯಕೀಯ ತಂಡ ತೀವ್ರ ನಿಗಾ ಇರಿಸಿದೆ. ತಂಡದ ಉಳಿದೆಲ್ಲ ಆಟಗಾರರು ಫಿಟ್ ಆಗಿದ್ದಾರೆಂದು ಉಪನಾಯಕ ಅಜಿಂಕ್ಯ ರಹಾನೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: VIDEO | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಿದ್ದು ಎದ್ದು ಓಡಿ ಗೆದ್ದಳು ಡಚ್​ ಓಟಗಾರ್ತಿ!

    ಚೆಂಡೇಟು ಬಿದ್ದ ಬಳಿಕ ಹೆಲ್ಮೆಟ್ ಕಳಚಿದ 30 ವರ್ಷದ ಮಯಾಂಕ್, ನೆಲದ ಮೇಲೆ ಕುಳಿತರು ಮತ್ತು ಕೂಡಲೆ ಫಿಸಿಯೋ ನಿತಿನ್ ಪಟೇಲ್ ಬಂದು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರು. ಬಳಿಕ ಫಿಸಿಯೋ ಜತೆಯಲ್ಲೇ ನೆಟ್ಸ್‌ನಿಂದ ನಿರ್ಗಮಿಸಿದರು. ಮೊದಲ ಟೆಸ್ಟ್‌ನಲ್ಲಿ ಆಡಲು ಅವಕಾಶ ಸಿಗಬೇಕಾದರೆ ಅವರು ಕನ್‌ಕಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಗತ್ಯವಾಗಿತ್ತು.

    ಮಯಾಂಕ್ ಗೈರಿನಲ್ಲಿ ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್, ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಬಂಗಾಳದ ಅಭಿಮನ್ಯು ಈಶ್ವರನ್ ತಂಡದಲ್ಲಿರುವ ಮತ್ತೋರ್ವ ಆರಂಭಿಕರಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಇನಿಂಗ್ಸ್ ಆರಂಭಿಸಿದ್ದ ಹನಮ ವಿಹಾರಿ ಮತ್ತೊಂದು ಆಯ್ಕೆಯಾಗಿದ್ದಾರೆ.

    ಸಿಂಧು ಅಭಿನಂದಿಸದ ಸೈನಾ !, ಸ್ಟಾರ್ ಆಟಗಾರ್ತಿಯರ ನಡುವೆ ಬಹಿರಂಗಗೊಂಡ ಶೀತಲ ಸಮರ

    ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ರಿಂಗ್‌ನಲ್ಲೇ ಪ್ರತಿಭಟನೆಗೆ ಕುಳಿತ ಬಾಕ್ಸರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts