More

    ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ

    ಮೂಲ್ಕಿ: ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ 10ನೇ ತೋಕೂರು ಗ್ರಾಮದ ಮಾಗಂದಡಿ ಪರಿಶಿಷ್ಟ ಪಂಗಡ ಕಾಲನಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕೆಲಸ ಕಳಪೆಯಾಗಿದ್ದು, ದುರಸ್ತಿ ಅಂಚಿಗೆ ತಲುಪಿದೆ.

    ಲೋಕೋಪಯೋಗಿ ಬಂದರು ಮತು ಒಳನಾಡು ಜಲಸಾರಿಗೆ ಉಪವಿಭಾಗದ 10 ಲಕ್ಷ ರೂ. ವೆಚ್ಚದಲ್ಲಿ ಗುತ್ತಿಗೆದಾರ ಮಾರ್ಕ್ ಡಿಸೋಜ ಈ ರಸ್ತೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದರು. ರಸ್ತೆಯ ಒಂದು ಕಡೆ ಸಂಪೂರ್ಣ ಒಡೆದಿದ್ದು, ಕಾಂಕ್ರೀಟ್ ಬಹಳ ತೆಳು ಇರುವಂತೆ ಕಂಡುಬಂದಿದೆ. ಲಾರಿ ಚಲಿಸಿದಾಗ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟು ಪೂರ್ತಿ ಕುಸಿಯುವ ಭೀತಿಯಲ್ಲಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ಹೇಮಾವತಿ ಮಾಹಿತಿ ನೀಡಿ, ಎರಡು ವರ್ಷಗಳ ಹಿಂದೆ ಕಾಮಗಾರಿ ನಡೆದಿದ್ದು ಈಗ ರಸ್ತೆ ಕುಸಿದಿದೆ. ಇದರಿಂದ ಸಮಸ್ಯೆಯಾಗಿದೆ. ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ರಸ್ತೆ ಕಾಮಗಾರಿ ಪರಿಶೀಲಿಸಿ ಸರಿಪಡಿಸುವಂತೆ ಯೋಜನೆಯ ಇಂಜಿನಿಯರ್ ಅವರಿಗೆ ಸೂಚಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಉಮಾನಾಥ ಕೋಟ್ಯಾನ್, ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts