More

    ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ; ಮುಸ್ಲಿಂ ಸಂಘಟನೆ ವಿರುದ್ಧ ಶ್ರೀರಾಮಸೇನೆ ದೂರು

    ಬೆಂಗಳೂರು: ಶಾಲಾ-ಕಾಲೇಜಿನಲ್ಲಿ ಹಿಜಾಬ್ ಸಂಬಂಧ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿರುವ ಮುಸ್ಲಿಂ ಸಂಘಟನೆ ಮುಖಂಡನ ವಿರುದ್ಧ ವಿಧಾನಸೌಧ ಠಾಣೆಗೆ ಶ್ರೀರಾಮಸೇನೆ ದೂರು ನೀಡಿದೆ.

    ಶ್ರೀರಾಮಸೇನೆ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್ ಎಂಬಾತ ದೂರು ನೀಡಿದ್ದಾರೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಕುರಿತು ಹೈಕೋರ್ಟ್‌ನ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಹಿಜಾಬ್ ಧರಿಸಿ ತರಗತಿ ಪ್ರವೇಶ ಮಾಡಬಾರದು. ಸರ್ಕಾರದ ಆದೇಶ ಪಾಲನೆ ಮಾಡಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿದರು.

    ಇದನ್ನೂ ಓದಿ: ಡೀಸೆಲ್ ಬೆಲೆ ಲೀಟರ್​ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?

    ಇದರ ವಿರುದ್ಧ ಎರಡೇ ದಿನಕ್ಕೆ ತಮಿಳುನಾಡಿನ ಮಧುರೈನಲ್ಲಿ ತೂಹೀರ್ ಜಮಾತ್ ಸಂಘಟನೆ ಮುಖಂಡ, ಸಾರ್ವಜನಿಕ ಸಭೆಯಲ್ಲಿ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿದ್ದಾನೆ. ಜಾರ್ಖಂಡ್‌ನಲ್ಲಿ ನಡೆದ ನ್ಯಾಯಾಧೀಶರ ಕೊಲೆಯಂತೆ ನಿಮ್ಮ ಕೊಲೆಯಾದರೆ ನಾವು ಹೊಣೆಯಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ. ಮುಖ್ಯ ನ್ಯಾಯಾಧೀಶರು ಶೃಂಗೇರಿಗೆ ತೆರಳುತ್ತಿರುವುದರ ಬಗ್ಗೆಯೂ ಉಲ್ಲೇಖಿಸುತ್ತಾ ಅವರ ಚಲನವಲದ ವಿಷಯ ಪ್ರಸ್ತಾಪಿಸಿದ್ದಾನೆ. ಹೈಕೋರ್ಟ್ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕೂಡಲೇ ತೂಹೀರ್ ಜಮಾತ್ ಮುಖಂಡನನ್ನು ಬಂಧಿಸಿ ನ್ಯಾಯಾಂಗ ನಿಂದನೆ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕೆಂದು ದೂರಿನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ. ಈಗಾಗಲೇ ವಕೀಲರಾದ ಸುಧಾ ಕಟ್ವ, ಕೊಟ್ಟ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿದವರ ಬಂಧನಕ್ಕೆ ಮತ್ತು ತೀರ್ಪು ಖಂಡಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗುತ್ತಿದೆ.
    | ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts