More

    ರೈತರ ಧರಣಿಗೆ ಮಣಿದ ಕೆಪಿಟಿಸಿಎಲ್ : 2 ವರ್ಷದ ನಂತರ ಪರಿಹಾರದ ಚೆಕ್

    ಬಾಗೇಪಲ್ಲಿ: ತಾಲೂಕಿನ ಜೂಲಪಾಳ್ಯ 66 ಕೆ.ವಿ.ವಿದ್ಯುತ್ ಟವರ್ ನಿರ್ಮಾಣಕ್ಕಾಗಿ ಜಮೀನು ನೀಡಿದ್ದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘ ತಾಲೂಕು ಸಮಿತಿ ನಡೆಸುತ್ತಿದ್ದ ಆಹೋರಾತ್ರಿ ಹೋರಾಟಕ್ಕೆ ಮಣಿದ ಕೆಪಿಟಿಸಿಎಲ್ ರೈತರಿಗೆ ಪರಿಹಾರದ ಚೆಕ್ ವಿತರಿಸಿದೆ.

    ತಾಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರದಲ್ಲಿ 220 ಕೆ.ವಿ. ವಿದ್ಯುತ್ ಸ್ವೀಕರಣ(ಸಬ್‌ಸ್ಟೇಷನ್) ಕೇಂದ್ರ ನಿರ್ಮಿಸಲಾಗಿದೆ. ಇಲ್ಲಿಂದ ಜೂಲಪಾಳ್ಯ ಹಾಗೂ ಇತರ ಪ್ರದೇಶಗಳಿಗೆ ಸರಬರಾಜು ಮಾಡಲು ರೈತರ ಕೃಷಿ ಜಮೀನುಗಳಲ್ಲಿ ಕೆಪಿಟಿಸಿಎಲ್ ವಿದ್ಯುತ್ ಟವರ್‌ಗಳು ನಿರ್ಮಿಸಿ ಕಳೆದ ಎರಡು ವರ್ಷಗಳಿಂದ ವಿದ್ಯುತ್ ಪೂರೈಸುತ್ತಿದೆ. ಆದರೆ ಜಮೀನು ಕಳೆದುಕೊಂಡ ರೈತರಿಗೆ ಮಾತ್ರ ಪರಿಹಾರ ನೀಡದೆ ಕಚೇರಿಗಳಿಗೆ ಅಲೆದಾಡಿಸಿಸುತ್ತಿದ್ದರು.
    ಅ.29 ರಂದು ಪ್ರತಿಭಟನೆ ನಡೆಸಿದಾಗ ನ.5ರಂದು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಮಾತು ಉಳಿಸಿಕೊಳ್ಳದ ಕಾರಣ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು ಹೋರಾಟ 2ನೇ ದಿನವೂ ಮುಂದುವರಿಯುತ್ತಿದ್ದಂತೆ ಎಚ್ಚೆತ್ತ ಕೆಪಿಟಿಸಿಎಲ್ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಚೆಕ್‌ಗಳನ್ನು ವಿತರಿಸಿದರು.

    ಸಂದ ತಾಲೂಕು ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ, ಮುಖಂಡ ಹೇಮಚಂದ್ರ, ರೈತರಾದ ಆರ್.ಶ್ರೀನಿವಾಸಲು, ಸಿ.ಎಂ.ಮಂಜುನಾಥ, ಗಂಗಾಧರಪ್ಪ, ಮಾರಪರೆಡ್ಡಿ, ಎಂ.ಆರ್.ಬಾಲಕೃಷ್ಣ, ಪಿ.ಜಿ.ಕೃಷ್ಣಪ್ಪ, ನಂದಗಿರಿಚಾರಿ, ಸಿ.ಪಿ.ಶ್ರೀನಿವಾಸ್, ಶ್ರೀರಾಮನಾಯಕ್, ಪ್ರಭಾಕರರೆಡ್ಡಿ, ಮದ್ದಲಖಾನೆ ಶ್ರೀನಿವಾಸ್, ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ಜಿ.ಎಂ.ವೆಂಕಟರೆಡ್ಡಿ, ಮದ್ದಿರೆಡ್ಡಿ, ಕೃಷ್ಣಮೂರ್ತಿ, ಗಂಗರಾಜು, ಅನಸೂಯಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts