More

    ಶಿಗ್ಗಾಂವಿ ತಾಲೂಕು ಕೈಬಿಟ್ಟಿರುವುದಕ್ಕೆ ಆಕ್ರೋಶ

    ಶಿಗ್ಗಾಂವಿ: ತಾಲೂಕನ್ನು ಬರಪಟ್ಟಿಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿರುವ ರೈತರ ಅನಿರ್ದಿಷ್ಟಾವಧಿ ಧರಣಿಯು ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ತಾಲೂಕಿನ ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಧರಣಿಗೆ ಬೆಂಬಲ ಸೂಚಿಸಿದ್ದಾರೆ. ರೈತ ಸಂಘದ ಅಧ್ಯಕ್ಷ ಮುತ್ತಪ್ಪ ಗುಡಗೇರಿ ಮಾತನಾಡಿ, ಸರ್ಕಾರವು ಮತ್ತೆ 23 ತಾಲೂಕುಗಳನ್ನು ಬರಪಟ್ಟಿಯಲ್ಲಿ ಸೇರ್ಪಡೆ ಮಾಡಿವೆ ಎಂಬ ಮಾಹಿತಿ ಇದ್ದು, ಈ ಕುರಿತು ತಹಸೀಲ್ದಾರರು ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ, ತಾಲೂಕನ್ನು ಬರಪೀಡಿತ ಎಂದು ಘೊಷಣೆ ಮಾಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದರು. ರೈತ ಮುಖಂಡ ಈಶ್ವರಗೌಡ ಪಾಟೀಲ ಮಾತನಾಡಿ, ಹೋರಾಟಗಳಿಗೆ ಬೆಲೆ ನೀಡದ ಈ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಸವರಾಜ ಹಾವೇರಿ, ಪಂಚಯ್ಯ ಹಿರೇಮಠ, ನಾಗಪ್ಪ ಕೊಟ್ಟನರ, ಮಾಲತೇಶ ಬಾರಕೇರ, ಹರೀಶ ಮೇಟಿ, ಶಂಭು ಕುರಗೋಡಿ, ದೇವಪ್ಪ ಹಳವಳ್ಳಿ, ನಿಂಗನಗೌಡ ರಾಯನಗೌಡ್ರ, ಗದಿಗೆಪ್ಪಗೌಡ್ರು ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts