More

    ಸಮುದಾಯ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ಮಾದರಿ: ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿಕೆ

    ಅಳವಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಡಾ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಂತೆ ದೇವಸ್ಥಾನ, ಧಾರ್ಮಿಕ ಕೇಂದ್ರ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಾ ಬಂದಿದೆ ಎಂದು ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೆಶಕ ಸದಾನಂದ ಬಂಗೇರ ಹೇಳಿದರು.


    ಇದನ್ನೂ ಓದಿ: ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರ ಸಬಲೀಕರಣ

    ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ 1 ಲಕ್ಷ ರೂ. ಅನುದಾನ

    ಸಮೀಪದ ಹಟ್ಟಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಜೀರ್ಣೋದ್ದಾರ ಸಮಿತಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ 1 ಲಕ್ಷ ರೂ. ಅನುದಾನದ ಚೆಕ್‌ನ್ನು ವಿತರಿಸಿ ಗುರುವಾರ ಮಾತನಾಡಿದರು. ಕಳೆದ 38 ವರ್ಷಗಳಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಅರಣ್ಯ, ಜಲ ರಕ್ಷಣೆ ಸೇರಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಸಂಸ್ಥೆಯ ಸಂಘದಲ್ಲಿ ಎಲ್ಲರೂ ಸೇರಿ ಸೌಲಭ್ಯ ಪಡೆದುಕೊಳ್ಳಬೇಕು. ಸಂಘದ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.


    ಗ್ರಾಪಂ ಅಧ್ಯಕ್ಷ ತೋಟಪ್ಪ ಶಿಂಟ್ರ, ತಾಲೂಕಾ ಯೋಜನಾಧಿಕಾರಿ ಜಗದೀಶ, ವಲಯ ಮೇಲ್ವಿಚಾರಕ ಮೋಟಯ್ಯ ಹಿರೇಮಠ, ಪ್ರಮುಖರಾದ ಭರಮಪ್ಪ ನಗರ, ನಿಂಗನಗೌಡ ಪಾಟೀಲ, ನಿಂಗಪ್ಪ, ಗುಡದಪ್ಪ, ಹೊನ್ನಪ್ಪಗೌಡ, ಹನುಮವ್ವ ಪೂಜಾರಿ, ಈರಪ್ಪ, ಗುಡದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts