More

    ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರ ಸಬಲೀಕರಣ

    ಯಳಂದೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸ್ತ್ರೀಯರನ್ನು ಕೇಂದ್ರಿಕರಿಸಿ ಆರ್ಥಿಕ ಚಟುವಟಿಕಗಳನ್ನು ಕೈಗೊಳ್ಳುವ ಮೂಲಕ ಮಹಿಳೆಯರನ್ನು ಸಬಲೀಕರಣ ಮಾಡುತ್ತಿರುವುದು ಶ್ಲಾಘನೀಯ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಮಸಣಪುರ ಗ್ರಾಮದ ಶನೈಶ್ಚರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಸಣಪುರ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಡಿಮೆ ಬಡ್ಡಿದರದಲ್ಲಿ ವ್ಯವಸ್ಥಿತವಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಉತ್ತಮ ಸೇವೆ ನೀಡುತ್ತಿದೆ. ಸಕಾಲದಲ್ಲಿ ಸರ್ಕಾರವೇ ನಿರ್ವಹಣೆ ಮಾಡಲು ಸಾಧ್ಯವಾಗದನ್ನು ಧರ್ಮಸ್ಥಳ ಸ್ವಯಂ ಸೇವಾ ಸಂಸ್ಥೆ ಮಾಡುತ್ತಿರುವುದು ಪ್ರಶಂಸನೀಯ ಎಂದರು.


    ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಒಕ್ಕೂಟದ ದಾಖಲಾತಿ ಹಸ್ತಾಂತರ ಮಾಡುವುದರ ಮೂಲಕ ಒಕ್ಕೂಟದ ಮಹತ್ವ ಹಾಗೂ ಯೋಜನೆಯ ಕಾರ್ಯಕ್ರಮಗಳನ್ನು ಸವಿಸ್ತಾರವಾಗಿ ತಿಳಿಸಿದರು. ಯೋಜನೆಯು ಜನರ ಸೇವೆಗೆ ಸದಾ ಸಿದ್ಧವಿದೆ. ನಿರಾಶ್ರಿತರಿಗೆ ನೀಡುವ ಮಾಸಾಶನ ಹಾಗೂ ಯೋಜನೆಯ ಕಾರ್ಯಕ್ರಮಗಳು ಬಡ ಜನರಿಗೆ ತಲುಪಲು ಎಲ್ಲ ವಿಧದಲ್ಲಿಯೂ ನಿರಂತರವಾಗಿ ಕಾರ್ಯಕರ್ತರು ದುಡಿಯಲು ಸಮರ್ಥರಿದ್ದೇವೆ. ಈ ಕಾರ್ಯಕ್ರಮದಲ್ಲಿ ಜನರ ಶಿಸ್ತುಬದ್ಧ ವ್ಯವಹಾರ, ವ್ಯಕ್ತಿತ್ವ, ಸಾಧನೆ, ಅಭಿವೃದ್ಧಿ ಕುರಿತು ಬಡ ಜನರಿಗೆ ಸಂಸ್ಥೆಯು ಆಶಾದಾಯಕವಾಗಿದೆ ಎಂದು ಅಭಯ ವ್ಯಕ್ತಪಡಿಸಿದರು.

    ನೂತನ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರಿಸಲಾಯಿತು ಹಾಗೂ ನಿಕಟಪೂರ್ವ ಒಕ್ಕೂಟದ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಿ. ನಾಗಮಣಿ, ಶಂಕರ್. ಸಿ. ಮಣಿ, ವಲಯ ಮೇಲ್ವಿಚಾರಕ ಪ್ರವೀಣ್, ವಿಜಯಕುಮಾರಿ, ಜಡೆಸ್ವಾಮಿ, ಸೇವಾಪ್ರತಿನಿಧಿಗಳು, ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts