More

    ನಿತ್ಯ ಸಂವಹನವಾಗಲಿ ಕನ್ನಡ ಭಾಷೆ

    ಸವದತ್ತಿ: ಅಖಂಡ ಕರ್ನಾಟಕಕ್ಕೆ ನಾಡಿನ ಅನೇಕ ಗಣ್ಯರ ಪ್ರತಿಫಲವಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.
    ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಕನ್ನಡಪರ ಕೆಲಸ ನಡೆದಿವೆ. ಪ್ರವಾಹ ಮತ್ತು ಕೋವಿಡ್-19 ನಿಂದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸೂಚನೆಯಂತೆ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗಿದೆ.

    ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ವಿಶಾಲತೆಯನ್ನು ಹೊಂದಿದ್ದು, ಪ್ರತಿಯೊಬ್ಬರೂ ಆಂಗ್ಲ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಬಿಇಒ ಎ.ಎನ್.ಕಂಬೋಗಿ ಮಾತನಾಡಿದರು. ವಿವಿಧ ಇಲಾಖೆಯಲ್ಲಿ ಉನ್ನತ ಸೇವೆ ಸಲ್ಲಿಸಿದ ಮಹನೀಯರಿಗೆ ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು. ಶಾಸಕ ಆನಂದ ಮಾಮನಿ ಡಿಸಿಸಿ ಬ್ಯಾಂಕ್‌ಗೆ ಸತತ 2ನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕಾಡಳಿತದಿಂದ ಅಭಿನಂದಿಸಲಾಯಿತು. ತಾಪಂ ಇಒ ಯಶವಂತಕುಮಾರ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂಥ್ರಿ, ತಹಸೀಲ್ದಾರ್ ಪ್ರಶಾಂತ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಪಿ.ಎಂ.ಚನ್ನಪ್ಪನವರ, ಅರಣ್ಯಾಧಿಕಾರಿ ಸುನೀತಾ ನಿಂಬರಗಿ, ಸಿಡಿಪಿಒ ಕಾಂಚನಾ ಅಮಠೆ, ಜಿಪಂ ಸದಸ್ಯ ಎಂ.ಎಸ್.ಹಿರೇಕುಂಬಿ, ಪುರಸಭೆ ಸದಸ್ಯ ದೀಪಕ ಜಾನ್ವೇಕರ, ಸಿದ್ದಯ್ಯ ವಡೆಯರ ಇದ್ದರು.

    ಮೂಡಲಗಿ ವರದಿ: ಪಟ್ಟಣದ ಶ್ರೀನಿವಾಸ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು. ಸುಣಧೋಳಿಯ ಜಡಿಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಸುರೇಶ ಲೆಂಕೆಪ್ಪನವರ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಮನೋಜ ಭಟ್ಟ, ಹನುಮಂತ ಸೋರಗಾವಿ, ಸೃಜನ್ ಅಂಗಡಿ, ಶೃದ್ಧಾ ಸಲ್ಲಾಗೋಳ, ನಾಗವೀರಣ್ಣ ಪತ್ತೇಪುರ ಇದ್ದರು.

    ಗೋಕಾಕ ವರದಿ: ಶತಮಾನಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಕಂಗ್ಲಿಷ್ ಮಯವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಬಿಇಒ ಜಿ.ಬಿ ಬಳಗಾರ ವಿಷಾದ ವ್ಯಕ್ತಪಡಿಸಿದ್ದಾರೆ. ಭಾನುವಾರ ತಾಲೂಕಾಡಳಿತದಿಂದ ನರಗದ ತಾಪಂ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ 32 ವಿದ್ಯಾರ್ಥಿಗಳು ಹಾಗೂ ಕರೊನಾ ಸೇನಾನಿಗಳನ್ನು ಹಾಗೂ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು. ಉಪ ತಹಸೀಲ್ದಾರ್ ಎಸ್.ಬಿ.ಕಟ್ಟಿಮನಿ, ಪೌರಾಯುಕ್ತ ಶಿವಾನಂದ ಹಿರೇಮಠ, ಕಿರಣ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ತಾಲೂಕು ವೈದ್ಯಾಧಿಕಾರಿ ಡಾ.ಕೊಪ್ಪದ, ಡಬ್ಬನವರ ಇದ್ದರು.

    ಮೊಳಗಿದ ಕನ್ನಡಾಭಿಮಾನ

    ಎಂ.ಕೆ.ಹುಬ್ಬಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಪಟ್ಟಣ ಪಂಚಾಯಿತಿ, ಪಟ್ಟಣದ ಸರ್ಕಲ್‌ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಸೇರಿ ವಿವಿಧೆೆಡೆ ಕನ್ನಡಾಂಬೆಯ ಭಾವಚಿತ್ರ ಇಟ್ಟು ಪೂಜಿಸಲಾಯಿತು. ಹೊಸಕಾದರವಳ್ಳಿ , ದಾಸ್ತಿಕೊಪ್ಪ ಗ್ರಾಮದಲ್ಲಿ ಕನ್ನಡದ ಬಾವುಟ ಹಾರಿಸಿ ಸಂಭ್ರಮಿಸಲಾಯಿತು. ಪಪಂ ಸದಸ್ಯರು, ಕನ್ನಡಾಭಿಮಾನಿಗಳು, ನಾಗರಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts